: ಹಂತ ಹಂತವಾಗಿ ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮಾ! : ಈ ಬಗ್ಗೆ ಮಾತನಾಡಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ʼರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ಜೂನ್‌ ಮತ್ತು ಜುಲೈ ತಿಂಗಳ ಹಣ ಹಂತಹಂತವಾಗಿ ಯಜಮಾನಿಯರ ಖಾತೆಗೆ ಜಮಾ ಆಗಲಿದೆʼ ಎಂದಿದ್ದಾರೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮಿʼ ಯೋಜನೆ ಹಣ ಲೋಕಸಭಾ ಚುನಾವಣೆ ನಂತರ ಯಜಮಾನಿಯರ ಖಾತೆಗೆ ಬಂದಿಲ್ಲ. ಹಣ ಬಾರದಿರುವುದು ಮಹಿಳೆಯರನ್ನು ಕಂಗೆಡೆಸಿದ್ದು, ಅವರು ಪ್ರತಿನಿತ್ಯ ಬ್ಯಾಂಕ್‌ ಹಾಗೂ ಅಂಗನವಾಡಿಗಳಿಗೆ ಅಲೆಯುವಂತಾಗಿದೆ. ದಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿತ್ತು. ಇದೇ ವೇಳೆ ಮಹಿಳೆಯರ ಖಾತೆಗೆ ಮೇ ತಿಂಗಳ ʼಗೃಹಲಕ್ಷ್ಮಿʼ ಹಣ ಸಂದಾಯವಾಗಿತ್ತು. ಇದಾಗಿ ಎರಡು ತಿಂಗಳು ಕಳೆದರೂ ಮತ್ತೆ ಹಣ ಬರದಿರುವುದು ಮಹಿಳೆಯರಲ್ಲಿ ಗೊಂದಲ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಇದೀಗ ಈ ಯೋಜನೆಯ ಬಗ್ಗೆ ಮಹತ್ವದ ಅಪ್‌ಡೇಟ್‌ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ʼರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಯೋಜನೆಯ ಜೂನ್‌ ಮತ್ತು ಜುಲೈ ತಿಂಗಳ ಹಣ ಹಂತಹಂತವಾಗಿ ಯಜಮಾನಿಯರ ಖಾತೆಗೆ ಜಮಾ ಆಗಲಿದೆʼ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಗಳಾದ್ಯಂತ ಹಂತ ಹಂತವಾಗಿ ʼಗೃಹಲಕ್ಷ್ಮಿʼ ಹಣ ವಿತರಣೆಯೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಯೋಜನೆ ಮುಂದುವರಿಯುತ್ತದೆ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಳೆದ ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ʼʼ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ಮಹಿಳೆಯರಿಗೆ ಮಾಸಿಕ 2,000 ರೂ.ಗಳ ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ʼಗೃಹಲಕ್ಷ್ಮಿʼ ಹಣ ಸಿಗದಿರುವುದು ಕೋಟ್ಯಂತರ ಮಹಿಳೆಯರಿಗೆ ಬೇಸರ ತರಿಸಿದೆ. ಅನೇಕರು ಪ್ರತಿದಿನ ಬ್ಯಾಂಕುಗಳಿಗೆ ಎಡತಾಕುತ್ತಿದ್ದು, ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...