: ಇಂತಹವರಿಂದ ದುಪ್ಪಟ್ಟು ಟೋಲ್ ವಸೂಲಿ, ಮನೆಯಿಂದ ಹೊರಡುವ ಮೊದಲು ತಪ್ಪದೇ ತಿಳಿಯಿರಿ : ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಹಾಗೂ ಸುಗಮ ಟೋಲ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಎನ್‌ಎಚ್‌ಎಐ ಹೊಸ ನಿಯಮವನ್ನು ಜಾರಿಗೆ ತಂದಿದೆ. :ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕವನ್ನು ತಪ್ಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ () ಹೊಸ ನಿಯಮವನ್ನು ರೂಪಿಸಿದೆ. ಈ ನಿಯಮಾನುಸಾರ, ವಾಹನಗಳ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಬೇಕಾಗಿದ್ದು, ಈ ನಿಯಮವನ್ನು ಅನುಸರಿಸದ ವಾಹನಗಳ ಚಾಲಕರಿಗೆ ಪ್ರಮಾಣಿತ ಟೋಲ್ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕವನ್ನು ವಿಧಿಸಲು ಎನ್‌ಎಚ್‌ಎಐ ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಪುನರಾವರ್ತಿತ ಅಪರಾಧಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಲಾಗಿದೆ. ಈ ಕುರಿತಂತೆ ಗುರುವಾರ (ಜುಲೈ 18) ಹೇಳಿಕೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, "ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ() ಅನ್ನು ಅಂಟಿಸದೇ ಇರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ ( ) ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ". ಇದನ್ನು ತಡೆಯುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸದ ಜನರಿಂದ ಡಬಲ್ ಟೋಲ್ ತೆರಿಗೆ ಸಂಗ್ರಹಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ- ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್:ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸದೆ ಟೋಲ್ ಲೇನ್‌ಗೆ ಪ್ರವೇಶಿಸುವ ಜನರು( )ಅನಗತ್ಯ ವಿಳಂಬವನ್ನು ಉಂಟುಮಾಡುತ್ತಾರೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅಳವಡಿಸದಿದ್ದಲ್ಲಿ ಡಬಲ್ ಟೋಲ್ ತೆರಿಗೆಯನ್ನು ಸಂಗ್ರಹಿಸಲು ಎಲ್ಲಾ ಏಜೆನ್ಸಿಗಳಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ () ಅನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೆ, ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಿದರೆ ದಂಡ ವಿಧಿಸುವ ಬಗ್ಗೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದ ವಾಹನಗಳಿಗೆ ವಾಹನ ನೋಂದಣಿ ಸಂಖ್ಯೆ () ಅನ್ನು ಸೆರೆಹಿಡಿಯುವ ಫೂಟೇಜ್ ಅನ್ನು ದಾಖಲಿಸಲಾಗುತ್ತದೆ. ಈ ಕ್ರಮವು ವಿಧಿಸಲಾದ ಶುಲ್ಕಗಳ ಸರಿಯಾದ ದಾಖಲೆಗಳನ್ನು ಮತ್ತು ಟೋಲ್ ಲೇನ್‌ಗಳಲ್ಲಿ ಅಂತಹ ವಾಹನಗಳ ಉಪಸ್ಥಿತಿಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ- ಎನ್‌ಎಚ್‌ಎಐ ಅಧಿಕಾರಿಗಳು ಈ ಕ್ರಮವು ಟೋಲ್ ಸಂಗ್ರಹದ ದಕ್ಷತೆಯನ್ನು ಹೆಚ್ಚಿಸಲು ಮತ್ತು ಎಕ್ಸ್‌ಪ್ರೆಸ್‌ವೇಗಳು ಮತ್ತು ಗ್ರೀನ್‌ಫೀಲ್ಡ್ ಹೆದ್ದಾರಿಗಳಂತಹ ಮುಚ್ಚಿದ ಟೋಲಿಂಗ್ ಸ್ಟ್ರೆಚ್‌ಗಳಲ್ಲಿ ಟೋಲ್ ತಪ್ಪಿಸುವ ನಿದರ್ಶನಗಳನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಒತ್ತಿ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...