ಬಜೆಟ್ 2024: ಮನೆ ಕನಸು ಇದ್ಯಾ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆ ಏನು? 2024: ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೋದಿ ಸರ್ಕಾರ 3.0 ಮೊದಲ ಬಜೆಟ್ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿವೆ. 2024:ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಧ್ಯಮ ವರ್ಗದ ಜನರ ಕನಸು. ಸ್ವಂತ ಮನೆ ಕಟ್ಟುವ ಪ್ಲಾನ್ ಮಾಡಿಕೊಳ್ಳುತ್ತಿರುವ ಜನರು ಜುಲೈ 23ರ ಬಜೆಟ್ ನಲ್ಲಿ ಯಾವೆಲ್ಲಾ ನಿರೀಕ್ಷೆಗಳಿವೆ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆಗಳೇನು? 2024-25ರ ಕೇಂದ್ರ ಬಜೆಟ್‌ಗಾಗಿ ರಿಯಲ್ ಎಸ್ಟೇಟ್ ವಲಯದ ಬೇಡಿಕೆಗಳೇನು?1. ತೆರಿಗೆ ರಿಯಾಯಿತಿ:ಮನೆ ಖರೀದಿದಾರರು ಬಹು ವರ್ಷದಿಂದಗಳ ಮೇಲಿನ ಹೆಚ್ಚಿನ ಕಡಿತಗಳು ( ), ಮತ್ತು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಮತ್ತು ಸೆಕ್ಷನ್ 24(ಬಿ) ಅಡಿಯಲ್ಲಿ ಮೂಲ ಮರುಪಾವತಿ ( ) ಗೆ ಆಗ್ರಹ ಮಾಡುತ್ತಿದ್ದಾರೆ. 2. ಸಿಂಗಲ್ ವಿಂಡೋ ಕ್ಲೀರೆನ್ಸ್ :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮೋದನೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಯೋಜನೆಯ ವಿಳಂಬವನ್ನು ಕಡಿಮೆ ಮಾಡಲು ಏಕ ಗವಾಕ್ಷಿ ಒಪ್ಪಿಗೆ ವ್ಯವಸ್ಥೆಯನ್ನು ( ) ಅಳವಡಿಸುವುದು. ಇದನ್ನೂ ಓದಿ- 3. ಕೈಗೆಟುಕುವ ದರದಲ್ಲಿ ವಸತಿ:ಕೈಗೆಟುಕುವ ದರದಲ್ಲಿಗಳಿಗೆ ಹೆಚ್ಚಿದ ಹಂಚಿಕೆ ಮತ್ತು ಕೈಗೆಟುಕುವ ಮನೆಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಬಜೆಟ್ ನಲ್ಲಿ ಘೋಷಣೆಗೆ ಆಶಯ ಹೊಂದಿದ್ದಾರೆ. ಇದರ ಜೊತೆ ಯೋಜನೆ ಅಡಿಯಲ್ಲಿ 2ನೇ ಹಾಗೂ 3ನೆಯ ದರ್ಜೆ ನಗರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಆ ನಗರ ಅಭಿವೃದ್ಧಿ ಮಾಡಬೇಕು. 4. ಸುಧಾರಣೆ :ಕಟ್ಟಡ ನಿರ್ಮಾಣ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದ ಇದೇ, ಬಜೆಟ್ ನಲ್ಲಿ ಪ್ರಮಾಣ ಕಡಿಮೆ ಮಾಡಿದ್ದಲ್ಲಿ ನಿರ್ಮಾಣ ಚಟುವಟಿಕೆ ಹೆಚ್ಚಾಗಲಿದೆ. 5. : ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ತೆರಿಗೆ ಪ್ರಯೋಜನಗಳೊಂದಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಿಗೆ ( ಗಳು) ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಿಗೆ () ಉತ್ತೇಜನ. ಇದನ್ನೂ ಓದಿ- 6. ಮೂಲಸೌಕರ್ಯ ಅಭಿವೃದ್ಧಿ:ಸಂಪರ್ಕವನ್ನು ಸುಧಾರಿಸಲು ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಬೆಂಬಲಿಸಲು ರಸ್ತೆಗಳು, ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹಲವಾರು ಯೋಜನೆ ನೀಡಬೇಕು. 7. ಬಾಡಿಗೆ ವಸತಿ:ಬಾಡಿಗೆ ಆದಾಯಕ್ಕೆ ತೆರಿಗೆ ವಿನಾಯಿತಿಗಳು ಮತ್ತು ಬಾಡಿಗೆ ವಸತಿ ಯೋಜನೆಗಳಿಗೆ ಬೆಂಬಲ ಸೇರಿದಂತೆ ಬಾಡಿಗೆ ಮನೆಗಳನ್ನು ಉತ್ತೇಜಿಸಲು ನೀತಿಗಳು ಮತ್ತು ಪ್ರೋತ್ಸಾಹ. 8. ಲಿಕ್ವಿಡಿಟಿ ಬೆಂಬಲ:ಡೆವಲಪರ್‌ಗಳಿಗೆ ಲಿಕ್ವಿಡಿಟಿಯನ್ನು ಸುಧಾರಿಸುವ ಕ್ರಮಗಳು, ಹಣಕಾಸು ಮಾರುಕಟ್ಟೆಯಿಂದ ಸುಲಭ ಹಣದ ಸಹಾಯ ಮತ್ತು ಲೋನ್‌ಗಳ ಮೇಲಿನ ಕಡಿಮೆ ಬಡ್ಡಿ ದರಗಳ ಬೇಡಿಕೆ. ಒಟ್ಟಾರೆ ಇವಿಷ್ಟು ಬೇಡಿಕೆ ಹಾಗೂ ನಿರೀಕ್ಷೆಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಮನೆ ಕಟ್ಟುವರು ಹೊಂದಿದ್ದು, ಯಾವ ರೀತಿ ಕೇಂದ್ರ ಸರ್ಕಾರ ಯೋಜನೆ ಘೋಷಣೆ ಮಾಡಲಿದೆ ಎಂದು ಕಾದುನೋಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...