ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆ ದೊಡ್ಡ ಗಿಫ್ಟ್ : ಕನಿಷ್ಠ ವೇತನ ಹೆಚ್ಚಳ ಬಹುತೇಕ ಫಿಕ್ಸ್ ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ.ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ. ಬೆಂಗಳೂರು :ಕೇಂದ್ರ ಸರ್ಕಾರ ಈ ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ.ಹೊಸ ಬಜೆಟ್‌ನಲ್ಲಿ ಹಲವು ಘೋಷಣೆಗಳು ಹೊರಬೀಳಬಹುದು.ಈ ಬಜೆಟ್‌ನಲ್ಲಿ ಕೇಂದ್ರ ನೌಕರರಿಗೆ ಉತ್ತಮ ಸುದ್ದಿ ಸಿಗಬಹುದು.ನೌಕರರ ಭವಿಷ್ಯ ನಿಧಿಗೆ ಕೊಡುಗೆ ನೀಡಲು ಕೇಂದ್ರ ಸರ್ಕಾರವು ಕನಿಷ್ಠ ಮೂಲ ವೇತನವನ್ನು ಹೆಚ್ಚಿಸಬಹುದು ಎಂಬ ಭರವಸೆ ಇದೆ. ಕನಿಷ್ಠ ಮೂಲ ವೇತನದಲ್ಲಿ ಹೆಚ್ಚಳ :ಪ್ರಸ್ತುತ15000 ರೂಪಾಯಿಗಳು.ಆದರೆ,ಇದನ್ನು 25,000 ರೂಪಾಯಿಗಳಿಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ. ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ. ಇದನ್ನೂ ಓದಿ : ಸಂಶೋಧನಾ ತಯಾರಿ :ಸಚಿವಾಲಯವು 10 ವರ್ಷಗಳ ನಂತರ ಈ ಸಂಶೋಧನೆಯನ್ನು ನಡೆಸುತ್ತಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಈ ತಿದ್ದುಪಡಿಯನ್ನು ಮಾಡಲಾಗುತ್ತಿದೆ.ಈ ಮೊದಲು, ಕನಿಷ್ಠ ಮೂಲ ವೇತನವನ್ನು 10 ವರ್ಷಗಳ ಹಿಂದೆ ಅಂದರೆ 1 ಸೆಪ್ಟೆಂಬರ್ 2014 ರಂದು ಹೆಚ್ಚಿಸಲಾಯಿತು. ಇದಾದ ಬಳಿಕ ಕನಿಷ್ಠ ವೇತನದ ಮಿತಿಯನ್ನು 6500 ರೂಪಾಯಿಗಳಿಂದ 15000 ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಕನಿಷ್ಠ ವೇತನದ ಮಿತಿ ಪ್ರಸ್ತುತ 15,000 ರೂ.ಆಗಿದೆ.ಆದರೆ, ನೌಕರರ ರಾಜ್ಯ ವಿಮಾ ನಿಗಮವು 2017ನೇ ವರ್ಷದಿಂದಲೇ ಕನಿಷ್ಠ ಮಿತಿಯನ್ನು 21 ಸಾವಿರ ರೂ.ಗೆ ಹೆಚ್ಚಿಸಿದೆ. ಇದನ್ನೂ ಓದಿ: ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಖಾತೆಯಲ್ಲಿ ಪಡೆದ ಮೂಲ ವೇತನ ಮತ್ತು ತುಟ್ಟಿಭತ್ಯೆಗೆ ತಲಾ 12 ಪ್ರತಿಶತವನ್ನು ಕೊಡುಗೆ ನೀಡುತ್ತಾರೆ.ಇದರಲ್ಲಿ ಉದ್ಯೋಗಿಗಳ ಸಂಪೂರ್ಣ ಕೊಡುಗೆಯನ್ನು ಇಪಿಎಫ್‌ಒ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಉದ್ಯೋಗದಾತರ ಕೊಡುಗೆಯ 8.33 ಪ್ರತಿಶತವನ್ನು ಉದ್ಯೋಗಿ ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ. ಉಳಿದ 3.67 ಪ್ರತಿಶತವನ್ನು ಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...