2029ರ ವರೆಗೆ ಉಚಿತ ಅಕ್ಕಿ ವಿತರಣೆ : ಯೋಜನೆ ವಿಸ್ತರಣೆ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು,ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ. ನವದೆಹಲಿ:ಕೇಂದ್ರ ಸರ್ಕಾರ, ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2029ರವರೆಗೂ ವಿಸ್ತರಿಸಿದೆ.ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಈ ವಿಷಯವನ್ನು ಘೋಷಿಸಿದ್ದಾರೆ. ಅನ್ನ ಯೋಜನೆಯಡಿ ದೇಶದಲ್ಲಿ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ದೊರಕಿದ್ದು,ಈ ಯೋಜನೆಯನ್ನು 2029ರ ವರೆಗೂ ಮುಂದುವರಿಸಲಾಗಿದೆ ಎಂದು ಜೋಷಿ ಹೇಳಿದ್ದಾರೆ. ಇದನ್ನೂ ಓದಿ : ಎನ್ಎಎಫ್ಇಡಿ, ಎನ್ ಸಿಸಿಎಫ್ ಹಾಗೂ ಕೇಂದ್ರೀಯ ಭಂಡಾರಗಳಲ್ಲಿ ಕೆಜಿಗೆ 29 ರೂ.ಯಂತೆ 5 ಮತ್ತು 10 ಕೇಜಿ ಚೀಲಗಳಲ್ಲಿ ಭಾರತ್ ಅಕ್ಕಿ ದೊರೆಯುತ್ತಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಅತಿ ಅಗ್ಗದ ಬೆಲೆಗೆ ಗೋಧಿ ಹಿಟ್ಟು: ಇನ್ನು,ಉಪಕ್ರಮದಲ್ಲಿ ಅತಿ ಅಗ್ಗದ ಬೆಲೆ ಅಂದರೆ ಕೇವಲ 27.5 ರೂ.ಗೆ ಕೆಜಿಗೆ ಗೋಧಿ ಹಿಟ್ಟು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಭಾರತ್ ದಾಲ್ ಉಪಕ್ರಮದಡಿಯಲ್ಲಿ ಕಡಲೆ ಮತ್ತು ಹೆಸರುಬೇಳೆ ಯನ್ನು ಕಡಿಮೆ ದರದಲ್ಲಿ ದೊರೆಯುವಂತಾಗಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಯೋಚಿತ ಉಪಕ್ರಮಗಳಿಂದಾಗಿ ದೇಶದ ಹಣದುಬ್ಬರ ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...