ದುಬಾರಿಯಾಗಲಿದೆ ಮತ್ತು ಆಹಾರ : ನೀವು ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. :ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಇನ್ಮುಂದೆ ನೀವು ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ ಮಾಡುವುದು ದುಬಾರಿಯಾಗಲಿದೆ. ಖಾಸಗಿ ವಾಹಿನಿಯಲ್ಲಿನ ವರದಿಯ ಪ್ರಕಾರ, ಆಹಾರ ವಿತರಣಾ ದೈತ್ಯರಾದ( ) ಬೆಂಗಳೂರು ಮತ್ತು ದೆಹಲಿಯಂತಹ ಕೆಲವು ಮಾರುಕಟ್ಟೆಗಳಲ್ಲಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ರೂ.ಗೆ ಏರಿಸಿದ್ದು, ಈ ಹೆಚ್ಚಳವು 20% ನಷ್ಟು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ- ಗಮನಾರ್ಹವಾಗಿ,() ಮತ್ತು ಸ್ವಿಗ್ಗಿ () ಎರಡೂ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿರುವುದು ಇದೇ ಮೊದಲೇನಲ್ಲ. ಈ ಎರಡೂ ಪ್ಲಾಟ್‌ಫಾರ್ಮ್ ಗಳು 2023ರಲ್ಲೂ ಕೂಡ ಶುಲ್ಕ ಹೆಚ್ಚಳ ಘೋಷಿಸಿದ್ದವು. ಜೊಮಾಟೊ ಕಂಪನಿ ಏಪ್ರಿಲ್‌ನಲ್ಲಿ, ರಾಷ್ಟ್ರೀಯ ರಾಜಧಾನಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 25% ರಷ್ಟು ಶುಲ್ಕ ಹೆಚ್ಚಳ ಘೋಷಿಸಿತ್ತು. ಇದನ್ನೂ ಓದಿ- ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಎಷ್ಟು?ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆಗಳಾದ ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಬ್ಲಿಂಕಿಟ್ ಮತ್ತು ಇನ್‌ಸ್ಟಾಮಾರ್ಟ್ ನಿರ್ವಹಿಸುವ ಕ್ವಿಕ್ ಕಾಮರ್ಸ್ ಶಾಖೆಗಳು ಹ್ಯಾಂಡ್ಲಿಂಗ್ ಚಾರ್ಜ್ ಎಂದು ಕರೆಯಲ್ಪಡುವ ಇದೇ ರೀತಿಯ ಶುಲ್ಕವನ್ನು ವಿಧಿಸುತ್ತವೆ. ಬೆಂಗಳೂರಿನಲ್ಲಿ, ಪ್ರತಿ ಆರ್ಡರ್‌ಗೆ ನಿರ್ವಹಣಾ ಶುಲ್ಕವಾಗಿ 4 ರೂಪಾಯಿಗಳನ್ನು ವಿಧಿಸುತ್ತದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಪ್ರತಿ ಆರ್ಡರ್‌ಗೆ 5 ರೂಪಾಯಿಗಳನ್ನು ವಿಧಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...