: ಈ ದಿನ ಜಮೆಯಾಗಲಿದೆ ʼಗೃಹಲಕ್ಷ್ಮೀʼ ಜೂನ್‌ ತಿಂಗಳ ಹಣ! : ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ , ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರವೇ ಜೂನ್‌ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಗೃಹಲಕ್ಷ್ಮೀʼ ಯೋಜನೆಯ ಜೂನ್‌ ತಿಂಗಳ ಕಂತಿನ ಹಣ ಶೀಘ್ರವೇ ಯಜಮಾನಿಯರ ಖಾತೆಗೆ ಜಮೆಯಾಗಲಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ʼಗೃಹಲಕ್ಷ್ಮೀʼ ಯೋಜನೆಯ ಹಣ ಬರದಿದ್ದರೆ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಅನರ್ಹರಿಗೆ ಯೋಜನೆಯ ಲಾಭ! ಯ ನೀತಿ ಸಂಹಿತೆಗೆ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ʼಗೃಹಲಕ್ಷ್ಮೀʼ ಯೋಜನೆಗೆ ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಯೋಜನೆಗೆ ಬಿಪಿಎಲ್‌, ಎಪಿಎಲ್‌ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್‌ದಾರರನ್ನು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಪಾವತಿದಾರರನ್ನು ʼಗೃಹಲಕ್ಷ್ಮೀʼ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿಸುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರು. ಇಂತಹ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಇದನ್ನೂ ಓದಿ: ಆದಾಯ ತೆರಿಗೆ ಪಾವತಿಸುತ್ತಿಲ್ಲವೆಂದು ಹಲವರು ಹೇಳುತ್ತಿದ್ದಾರೆ. ಇಂತಹವರಿಗೆ ಆದಾಯ ತೆರಿಗೆ ಪಾವತಿಸದ ಕುರಿತು ದೃಢೀಕರಣ ಪತ್ರ ತರಲು ಕೇಳಿದ್ದೆವು. 1.78 ಲಕ್ಷ ಮಂದಿಯ ಪೈಕಿ 6 ಸಾವಿರಕ್ಕೂ ಹೆಚ್ಚು ಮಂದಿ ಮಾತ್ರ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಇವರನ್ನು ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಸಿದವರಿಗೆ 2 ಸಾವಿರ ರೂ. ನೀಡಲಾಗುತ್ತದೆ. ಆದರೆ ದೃಢೀಕರಣ ಪತ್ರ ಸಲ್ಲಿಸದವರಿಗೆ ಯೋಜನೆಯ ಹಣ ದೊರೆಯುವುದಿಲ್ಲ. ಶೀಘ್ರವೇ ಹಣ ಜಮಾ! 2023ರ ಜುಲೈ ತಿಂಗಳಲ್ಲಿ ʼಗೃಹಲಕ್ಷ್ಮೀʼ ಯೋಜನೆಗೆ ನೋಂದಣಿ ಆರಂಭವಾಗಿತ್ತು. ನಂತರ ಆಗಸ್ಟ್‌ ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆ ಮಾಡಲಾಯಿತು. ಆರಂಭದಲ್ಲಿ ಈ ಯೋಜನೆಯಡಿ 1.8 ಕೋಟಿ ಫಲಾನುಭವಿಗಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮಂದಿ ಸಹ ಈ ಯೋಜನೆಯ ಲಾಭ ಪಡೆದಿದ್ದರು. ಈ ಪೈಕಿ 1.78 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ , ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರವೇ ಜೂನ್‌ ತಿಂಗಳ ಹಣ ಫಲಾನುಭವಿಗಳ ಖಾತೆಗೆಆಗಲಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...