ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್ ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ. ಬೆಂಗಳೂರು :ನೀವು ಸಹ ಬ್ಯಾಂಕ್‌ನ ಗ್ರಾಹಕರಾಗಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಹೌದು,ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.ಸಿಸ್ಟಮ್ ಅಪ್ಗ್ರೇಡ್ ನಂತರ ಬ್ಯಾಂಕಿಂಗ್ ಕಾರ್ಯಾಚರಣೆಗಳ ಸ್ಪೀಡ್ ಮೊದಲಿಗಿಂತ ಹೆಚ್ಚಾಗಿರುತ್ತದೆ.ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ.ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ. ವಿವರವಾದ ಮಾಹಿತಿಗಾಗಿ ಬ್ಯಾಂಕಿನ ವೆಬ್‌ಸೈಟ್ ನೋಡಿ :ಭೇಟಿ ನೀಡುವ ಮೂಲಕ ಈ ಅವಧಿಯಲ್ಲಿ ಯಾವ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಸ್ಟಮ್ ಅಪ್ಗ್ರೇಡ್ ಕಾರ್ಯದಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರುವಂತೆ ನೋಡಿಕೊಳ್ಳಲು ಜುಲೈ 12 ಅಂದರೆ ಇಂದು ರಾತ್ರಿ 7:30ರ ಮೊದಲು ಅಗತ್ಯ ಇರುವಷ್ಟು ಹಣವನ್ನು ವಿಡ್ರಾ ಮಾಡುವಂತೆ ಸೂಚಿಸಿದೆ. ಅಥವಾ ಯಾರಿಗಾದರೂ ಹಣ ಕಳುಹಿಸಬೇಕು ಎಂದಾದರೆ ಮೊದಲೇ ಆ ಕೆಲಸವನ್ನು ಮಾಡಿ ಮುಗಿಸುವಂತೆ ಹೇಳಿದೆ. ಇದನ್ನೂ ಓದಿ : ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವನ್ನು ನೀಡಲಾಗುವುದಿಲ್ಲ :ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಪ್ಗ್ರೇಡ್ ಕಾರ್ಯವನ್ನು ರಜಾದಿನಗಳಲ್ಲಿ ಮಾಡಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.ನೀಡಿದ ಮಾಹಿತಿಯಲ್ಲಿ,ಜುಲೈ 13, 2024ರಂದು ಬೆಳಿಗ್ಗೆ 3ರಿಂದ ಸಂಜೆ 4:30 ರವರೆಗೆ ನಡೆಯುವ ಸಿಸ್ಟಮ್ ಅಪ್ಗ್ರೇಡ್ ಕಾರ್ಯದಲ್ಲಿ ಠೇವಣಿ, ಹಣ ವರ್ಗಾವಣೆ,ಮಿನಿ ಸ್ಟೇಟ್‌ಮೆಂಟ್, ವಿಚಾರಣೆ/ಬಿಲ್‌ಪೇ ಸೇವೆ ಮತ್ತು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ ಸೌಲಭ್ಯ ದೊರೆಯುವುದಿಲ್ಲ. ಇದಲ್ಲದೇ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವು ಸಿಸ್ಟಮ್ ನವೀಕರಣದ ಸಮಯದಲ್ಲಿ ಲಭ್ಯವಿರುತ್ತದೆ.ಹಣ ವರ್ಗಾವಣೆಗಾಗಿ, , , , ಬ್ಯಾಂಕ್ ಖಾತೆಯಿಂದ ಖಾತೆಗೆ ಆನ್‌ಲೈನ್ ವರ್ಗಾವಣೆ ಮತ್ತು ಶಾಖೆ ವರ್ಗಾವಣೆ ಸೇರಿದಂತೆ ಎಲ್ಲಾ ಹಣ ವರ್ಗಾವಣೆ ಸೌಲಭ್ಯಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...