: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು : ಟೋಲ್ ಪ್ಲಾಜಾಗಳಲ್ಲಿ ದಾಟುವಾಗ ಶುಲ್ಕ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಕೆಲವು ಸಂದರ್ಭದಲ್ಲಿ ನೀವು ಟೋಲ್ ಶುಲ್ಕ ಪಾವತಿಸದೆ ಟೋಲ್ ಬೂತ್ ಅನ್ನು ಕ್ರಾಸ್ ಮಾಡಬಹುದು ಎಂಬ ಬಗ್ಗೆ ತಿಳಿದಿದೆಯೇ? :ನೀವು ಯಾವುದೇ ಮೆಟ್ರೋ ನಗರ ಅಥವಾ ಸಣ್ಣ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಹಾದುಹೋಗುವಾಗ ಟೋಲ್ ಬೂತ್ ಗಳಲ್ಲಿ ಶುಲ್ಕವನ್ನು ಪಾವತಿಸಬೇಕು. ಆದಾಗ್ಯೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ () ನಿರ್ವಹಿಸುವ ಯಾವುದೇ ಟೋಲ್ ಪ್ಲಾಜಾದಲ್ಲಿ ಕೆಲವು ಸಂದರ್ಭಗಳಲ್ಲಿ ನೀವು ಟೋಲ್ ಶುಲ್ಕವನ್ನು ಪಾವತಿಸದೆ ಮುಂದೆ ಸಾಗಬಹುದು. ಯಾವ ಸಂದರ್ಭದಲ್ಲಿ ಈ ಸೌಲಭ್ಯ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? () ಎರಡು ಷರತ್ತುಗಳ ಅಡಿಯಲ್ಲಿ ವಾಹನ ಚಾಲಕರು ಶುಲ್ಕವನ್ನು ಪಾವತಿಸದೆ ಟೋಲ್ ಬೂತ್ ಮೂಲಕ ಹಾದುಹೋಗಲು ಅನುಮತಿಸುತ್ತದೆ. ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಮೇ 26, 2021ರ ಆದೇಶದಲ್ಲಿ ಈ ಎರಡು 'ನಿಯಮಗಳನ್ನು' ಉಲ್ಲೇಖಿಸಲಾಗಿದೆ. ಇದನ್ನೂ ಓದಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಎರಡು ಸಂದರ್ಭಗಳಲ್ಲಿ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿಸದೆ ಉಚಿತವಾಗಿ ಟೋಲ್ ಹಾದುಹೋಗಬಹುದು.ಟೋಲ್ ಪ್ಲಾಜಾದಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಂತಾಗ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಮೊದಲನೆಯದಾಗಿ, ಟೋಲ್ ಪ್ಲಾಜಾದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ವಾಹನವು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದರೆ ಆಗ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸದೆ ಟೋಲ್ ಹಾದುಹೋಗಬಹುದು. ವಾಸ್ತವವಾಗಿ, ಪ್ರತಿ ಟೋಲ್ ಪ್ಲಾಜಾದಲ್ಲಿ ರಸ್ತೆಯ ಮೇಲೆ ಹಳದಿ ಪಟ್ಟಿಯನ್ನು ಹಾಕಲಾಗುತ್ತದೆ, ಇದು 100 ಮೀಟರ್ ದೂರವನ್ನು ಗುರುತಿಸುತ್ತದೆ. ಹಾಗಾಗಿ, ಇದಕ್ಕಿಂತಲ್ಲೂ ಹೆಚ್ಚಿನ ದೂರದಲ್ಲಿ ನೀವು ಟೋಲ್ ಪ್ಲಾಜಾದಲ್ಲಿ ಕಾಯುತ್ತಿದ್ದರೆ ನೀವು ಟೋಲ್ ಪಾವತಿಸದೆ ಕಾನೂನುಬದ್ಧವಾಗಿ ಟೋಲ್ ಹಾದುಹೋಗಬಹುದು. ಇದನ್ನೂ ಓದಿ- ಅಧಿಕ ಸಮಯ:ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮತ್ತೊಂದು ನಿಯಮದ ಪ್ರಕಾರ, ಯಾವುದೇ ಟೋಲ್ ಗೇಟ್‌ನಲ್ಲಿ ನಿಮ್ಮ ಸರದಿಗಾಗಿ ನೀವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದ್ದಲ್ಲಿ ಅಂತಹ ಸಂದರ್ಭದಲ್ಲಿಯೂ ನೀವು ಕಾನೂನುಬದ್ಧವಾಗಿ ಶುಲ್ಕ ಪಾವತಿಸದೆ ಟೋಲ್ ಪ್ಲಾಜಾ ಮೂಲಕ ಉಚಿತವಾಗಿ ಹಾದು ಹೋಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ನಿಯಮಗಳನ್ನು ರೂಪಿಸಿರುವುದಷ್ಟೇ ಅಲ್ಲದೆ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಸಹಾಯವಾಣಿ ಸಂಖ್ಯೆಯನ್ನು ಕೂಡ ಸ್ಥಾಪಿಸಿದೆ. ಯಾವುದೇ ಟೋಲ್ ಪ್ಲಾಜಾದಲ್ಲಿ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದಾಗ ವಾಹನ ಚಾಲಕರು ಟೋಲ್-ಫ್ರೀ ಸಹಾಯವಾಣಿ 1033 ಗೆ ಕರೆ ಮಾಡುವ ಮೂಲಕ ತಮ್ಮ ದೂರನ್ನು ನೋಂದಾಯಿಸಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...