ರೀತಿಯೇ ಕೆಲಸ ಮಾಡುತ್ತದೆ : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯ :ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ () ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. :ನೀವು ಕೂಡಾ ಬಳಸುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಬಳಕೆದಾರರು ಮೊದಲ ಬಾರಿಗೆ ವಿಶೇಷ ಸೌಲಭ್ಯ ಪಡೆಯಲಿದ್ದಾರೆ. ಈ ಸೌಲಭ್ಯದ ಅಡಿಯಲ್ಲಿ ನಿಮ್ಮ ಬಳಿ ಹಣವಿದ್ದರೂ ಇಲ್ಲದಿದ್ದರೂ ಯುಪಿಐ ಮೂಲಕ ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ.ಹೌದು,ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ () ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಸಿಸ್ಟಮ್ ಬೈ ನೌ, ಪೇ ಲೇಟರ್ ಅನ್ನು ಆಧರಿಸಿರುತ್ತದೆ. ಆರ್‌ಬಿಐ ಅನುಮತಿಯೊಂದಿಗೆ ಸೌಲಭ್ಯ ಆರಂಭಿಸಿದ ಈ ಬ್ಯಾಂಕ್‌ಗಳು :ಮೂಲಗಳ ಪ್ರಕಾರ, ಮೂಲಕ ಗ್ರಾಹಕರಿಗೆಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ () ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.ಆಕ್ಸಿಸ್ ಬ್ಯಾಂಕ್,ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಪಿಎನ್‌ಬಿ ಸೇರಿದಂತೆ ಹಲವು ಬ್ಯಾಂಕ್‌ಗಳು ಈ ಹೊಸ ಸೌಲಭ್ಯವನ್ನು ಒದಗಿಸುತ್ತಿವೆ.ಕ್ರೆಡಿಟ್ ಲೈನ್‌ನಲ್ಲಿ, ಗ್ರಾಹಕರು ನಿಗದಿತ ಮಿತಿಯವರೆಗೆ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇಲ್ಲಿ ಗ್ರಾಹಕರು ಖರ್ಚು ಮಾಡಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಯ ಈ ಹೊಸ ಸೌಲಭ್ಯದಲ್ಲಿ,ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕಡಿತಗೊಳಿಸದೆಯೇ ಶಾಪಿಂಗ್ ಮಾಡಬಹುದು. ಇದನ್ನೂ ಓದಿ : ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ :ಈ ಸೌಲಭ್ಯವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ನಿಗದಿತ ಸಮಯದಲ್ಲಿ ಪಾವತಿಸಬೇಕು.ಪ್ರಸ್ತುತ ಈ ಕ್ರೆಡಿಟ್ ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರ ಬಳಸಬಹುದು.ಗ್ರಾಹಕರು ಈ ಸೌಲಭ್ಯವನ್ನು ಬಳಸಿದಾಗ,ಅಂಗಡಿ ಮಾಲೀಕರು ಈ ಸೇವೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಹೊಸ ಸೌಲಭ್ಯಕ್ಕಾಗಿ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಇದು ಯ ಹೊಸ ವೈಶಿಷ್ಟ್ಯವಾಗಿದೆ. ಇದನ್ನು ಬಳಸಲು ಯಾವುದೇ ಹೊಸ ಸಿಸ್ಟಮ್ ಅಥವಾ ಹೊಸ ಪ್ರಕ್ರಿಯೆಯ ಅಗತ್ಯವೂ ಇಲ್ಲ. ಶಾಪಿಂಗ್‌ಗಾಗಿ ಬಹಳಷ್ಟು ಹಣ ಖರ್ಚು ಮಾಡುವವರು ಇದ್ದಾರೆ :ಸುಮಾರು 53% ಜನರು ಅನ್ನು ಬಳಸುತ್ತಾರೆ. ಇದಲ್ಲದೆ, 30% ಜನರು ಆನ್‌ಲೈನ್ ಪಾವತಿಗಾಗಿ ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ (ಕ್ರೆಡಿಟ್ ಅಥವಾ ಡೆಬಿಟ್) ಬಳಸುತ್ತಾರೆ.ಮತ್ತೊಂದೆಡೆ, ಸುಮಾರು 75% ಜನರು ಇನ್ನೂ ಅಂಗಡಿಗೆ ಹೋಗುವಾಗ ಮತ್ತು ಸರಕುಗಳನ್ನು ಖರೀದಿಸುವಾಗ ಹಣವನ್ನು ಬಳಸುತ್ತಾರೆ.ಆದರೆ 25% ಜನರು ಅಂಗಡಿಯಲ್ಲಿ ಮೂಲಕ ಪಾವತಿಸುತ್ತಾರೆ. 20% ಜನರು ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ ಅನ್ನು ಬಳಸುತ್ತಾರೆ. ಇದನ್ನೂ ಓದಿ : ಕಳೆದ ಕೆಲವು ವರ್ಷಗಳಲ್ಲಿ, ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ನಿಂದ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ. ಮೊದಲಿಗೆ, ಲೈಟ್ ಅನ್ನು ಪ್ರಾರಂಭಿಸಲಾಯಿತು. ಇದರಲ್ಲಿ, ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ನಿರ್ದಿಷ್ಟ ಮೊತ್ತವನ್ನು ವರ್ಚುವಲ್ ವ್ಯಾಲೆಟ್‌ಗೆ ವರ್ಗಾಯಿಸಲಾಗುತ್ತದೆ. ಆ ಹಣವನ್ನು ಸಣ್ಣ ಪಾವತಿಗಳನ್ನು ಮಾಡಲು ಬಳಸಬಹುದು. ಇದರ ನಂತರ, ರುಪೇ ಕಾರ್ಡ್ ಹೊಂದಿರುವವರಿಗೆ ತಮ್ಮ ಕಾರ್ಡ್ ಅನ್ನು ಅಪ್ಲಿಕೇಶನ್‌ಗೆ ಸೇರಿಸಲು ಮತ್ತು ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕ್ರೆಡಿಟ್ ಕಾರ್ಡ್‌ನಂತೆ ಪಾವತಿ ಮಾಡುವ ಸೌಲಭ್ಯವನ್ನು ಒದಗಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಇತ್ತೀಚೆಗೆ ಬಿಡುಗಡೆ ಮಾಡಿದ ಡಿಜಿಟಲ್ ರೂಪಾಯಿಯನ್ನು ಯೊಂದಿಗೆ ಸಹ ಬಳಸಬಹುದು. ಈಗ ನೀವು ನಿಮ್ಮ ಇ-ರೂಪಾಯಿ ವ್ಯಾಲೆಟ್‌ನಿಂದ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...