ಮಗಳಿಗಾಗಿ ಡ್ರೈವರ್‌ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್.. ವಿಡಿಯೋ ವೈರಲ್!!‌ : ಐಷಾರಾಮಿ ಕಾರುಗಳ ಹಿಂದಿನ ಸೀಟಿನಲ್ಲಿ ರಾಜನಂತೆ ಕುಳಿತುಕೊಳ್ಳುತ್ತಿದ್ದ ಉದ್ಯಮಿ ಮುಕೇಶ್ ಮಗಳಿಗಾಗಿ ಮರ್ಸಿಡಿಸ್ ಕಾರನ್ನು ಓಡಿಸುವ ಅಪರೂಪದ ವೀಡಿಯೊ ಕ್ಲಿಪ್ ವೈರಲ್‌ ಆಗಿದೆ.. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಯಾವಾಗಲೂ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶವನ್ನು ಹುಡುಕುತ್ತಾರೆ.. ಕೆಲವೊಮ್ಮೆ ಅವರು ತಮ್ಮ ಮಕ್ಕಳಿಗೆ ಬಿಜಿನೆಸ್ ಗುರುವಾಗುತ್ತಾರೆ.. ಮತ್ತೇ ಕೆಲವೊಮ್ಮೆ ಅವರ ಡ್ರೈವರ್‌ ಕೂಡಾ ಆಗುತ್ತಾರೆ.. ಇತ್ತೀಚೆಗೆ ಮರ್ಸಿಡಿಸ್ ಕಾರಿನ ಡ್ರೈವರ್ ಸೀಟಿನಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪಕ್ಕದ ಸೀಟಿನಲ್ಲಿ ಅವರ ಪುತ್ರಿ ಇಶಾ ಅಂಬಾನಿ ಕುಳಿತಿರುವ ವಿಡಿಯೋವೊಂದು ಹೊರಬಿದ್ದಿದೆ. 10,14,700 ಕೋಟಿ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಮಗಳಿಗೆ ಚಾಲಕನಾಗಿರುವುದು ಎಲ್ಲರಿಗೂ ಶಾಕ್ ನೀಡಿದೆ.. ಆದರೆ, ಬಿಲಿಯನೇರ್ ಮುಖೇಶ್ ಅಂಬಾನಿಯಾದರೂ ಮಗಳಿಗಾಗಿ ತಂದೆ ಏನು ಬೇಕಾದರೂ ಮಾಡಲು ಸಿದ್ಧ. ಮುಕೇಶ್ ಅಂಬಾನಿ ಮತ್ತು ಇಶಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ- ಇನ್ನು ಮುಖೇಶ್‌ ಅಂಬಾನಿ ರೋಲ್ಸ್ ರಾಯ್ಸ್, ರೇಂಜ್ ರೋವರ್ ಮತ್ತು ಮರ್ಸಿಡಿಸ್ ಕಾರುಗಳನ್ನು ಒಳಗೊಂಡಿರುವ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.. ಈ ವರ್ಷದ ಆರಂಭದಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು 12 ಕೋಟಿ ರೂಪಾಯಿ ಮೌಲ್ಯದ ವೈಯಕ್ತಿಕ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಖರೀದಿಸಿದರು. ಇದು ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕರ ಮಾಲೀಕತ್ವದ ಎರಡನೇ ರೋಲ್ಸ್ ರಾಯ್ಸ್ ಆಗಿದೆ. ಕಳೆದ ವರ್ಷ ದೀಪಾವಳಿಯಂದು ಮುಖೇಶ್ ಅಂಬಾನಿ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.. ಇತ್ತೀಚೆಗಷ್ಟೇ ದೇಶದ ಶ್ರೀಮಂತರ ಪಟ್ಟಿ ಬಹಿರಂಗಗೊಂಡಿದ್ದು, ಕೈಗಾರಿಕೋದ್ಯಮಿ ಗೌತಮ್ ಅದಾನಿ 11 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮುಖೇಶ್ ಅಂಬಾನಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...