: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..? : ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2,000 ರೂ. ಹಣ ಜಮೆ ಆಗುತ್ತಿದೆ. ಆದರೆ ಇದೀಗ ಇದುವರೆಗೂ ಈ ಯೋಜನೆಯ ಫಲಾನುಭವಿಗಳಾಗಿದ್ದ ಕೆಲವು ಮಹಿಳೆಯರಿಗೆ ಶಾಕ್ ಎದುರಾಗಿದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಸರ್ಕಾರದ ಪ್ರಮುಖ 5 ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿಯೂ ಒಂದು. ಈ ಯೋಜನೆಯಡಿ ಇಷ್ಟುದಿನ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿತ್ತು. ಆದರೆ ಇದೀಗ ಕೊಂಚ ಬದಲಾವಣೆ ತರಲು ರಾಜ್ಯ ಸರ್ಕಾರವು ಮುಂದಾಗಿದ್ದು, ಇದರಿಂದ ಕೆಲವು ಮಹಿಳೆಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ಏಕೆಂದರೆ ಕೆಲವರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಯೋಜನೆಯಡಿ ಮಾರ್ಚ್ ನಂತರ ಹೊಸದಾಗಿ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನೂ ಪರಿಗಣಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಈ ನಡುವೆ ಕೆಲವು ಮಹಿಳೆಯರಿಗೆ ಶಾಕ್ ನೀಡಲು ಮುಂದಾಗಿದೆ. ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ: ಇಂತಹ ಬರೋಬ್ಬರಿ 1.78 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಇಂತವರಿಗೆ ಆದಾಯ ತೆರಿಗೆ ಪಾವತಿಸದ ಬಗ್ಗೆ ದೃಢೀಕರಣ ಪತ್ರ ತರಲು ಕೇಳಲಾಗಿತ್ತು. 1.78 ಲಕ್ಷ ಮಂದಿಯ ಕೇವಲ ಪೈಕಿ 6,000ಕ್ಕೂ ಹೆಚ್ಚು ಜನರು ಮಾತ್ರ ದೃಢೀಕರಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಇವರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುವುದು. ದೃಢೀಕರಣ ಪತ್ರ ಸಲ್ಲಿಕೆ ಮಾಡಿದವರಿಗೆ 2,000 ರೂ. ನೀಡಲಾಗುತ್ತದೆ. ನೀಡದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯುವುದಿಲ್ಲವೆಂದು ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೂ ಮುನ್ನ ಮತ್ತು ನಂತರ ಅರ್ಜಿ ಸಲ್ಲಿಸಿದವರನ್ನೂ ಗೃಹಕ್ಷ್ಮಿ ಯೋಜನೆಗೆ ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ 2 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಯೋಜನೆಗೆ, ಎಪಿಎಲ್‌ ಪಡಿತರ ಹೊಂದಿರುವವರು ಎಂಬ ಭೇದ-ಭಾವವಿಲ್ಲದೆ ಎರಡೂ ವರ್ಗದ ಕಾರ್ಡ್‌ದಾರರನ್ನು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...