: ʼಗೃಹಲಕ್ಷ್ಮಿʼ ಹಣ ಬರದಿದ್ರೆ ಇಂದೇ ಈ ಕೆಲಸಗಳನ್ನು ಮಾಡಿ! : ಕೆಲವು ಕಾರಣಗಳಿಂದ ನೂರಾರು ಮಹಿಳೆಯರಗೆ ಹಣ ಬಂದಿಲ್ಲ. ಹೀಗಾಗಿ ಅನೇಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಗ್ಯಾರಂಟಿ ಹಣ ಬಾರದಿರುವ ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೆ ಕೆಲವು ಕೆಲಸಗಳನ್ನು ಮಾಡಿದ್ರೆ ಗೃಹಲಕ್ಷ್ಮಿ ಹಣ ಬರುತ್ತದೆ. :ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಲಕ್ಷ್ಮಿ ಯೋಜನೆʼಯಡಿ ಮನೆಯ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ಮೇ ತಿಂಗಳವರೆಗೆ ಸರಿಯಾಗಿ ಹಣ ಜಮಾ ಆಗುತ್ತಿತ್ತು. ಆದರೆ ಮೇ ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲವೆಂಬ ಆರೋಪಗಳು ಕೇಳಿಬಂದಿವೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ʼಜೂನ್​ ಹಾಗೂ ಜುಲೈ ತಿಂಗಳ ಕಂತುಗಳು ಇನ್ನೂ ಜಮಾ ಮಾಡಿಲ್ಲ. ಎರಡ್ಮೂರು ದಿನಗಳಲ್ಲಿ ಮಹಿಳೆಯರ ಖಾತೆ ಜಮಾ ಮಾಡಲಾಗುತ್ತದೆʼ ಅಂತಾ ಹೇಳಿದ್ದರು. ಕೆಲವು ಕಾರಣಗಳಿಂದ ನೂರಾರು ಮಹಿಳೆಯರಗೆ ಹಣ ಬಂದಿಲ್ಲ. ಹೀಗಾಗಿ ಅನೇಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೂಬಾರದಿರುವ ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೆ ಕೆಲವು ಕೆಲಸಗಳನ್ನು ಮಾಡಿದ್ರೆ ಗೃಹಲಕ್ಷ್ಮಿ ಹಣ ಬರುತ್ತದೆ. ಗೃಹಲಕ್ಷ್ಮಿ ಹಣ ಬರಬೇಕಾದರೆ ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ... ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾರದಿದ್ರೆ ಈ ಕೆಲಸ ಮಾಡಿ * ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು.* ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.* ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದಿರುವವರು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಹೀಗಾಗಿ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.* ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಡ್ಡಾಯಗೊಳಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ - ಆಧಾರ್ ಸೀಡಿಂಗ್ ಮಾಡಿಸಬೇಕು.* ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ ಬರುತ್ತದೆ. ಹಲವು ಬಾರಿ ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್‌ನಲ್ಲಿ ಹೋಗಿ ಪಾಸ್‌ಬುಕ್ ಚೆಕ್ ಮಾಡಿಸಬೇಕು.*ಯೋಜನೆಯಡಿ ನೋಂದಣಿ ಮಾಡಿಸಿ ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...