ಒಂದು ಕಾಲದಲ್ಲಿ ಮುಖೇಶ್ ಅಂಬಾನಿಗಿಂತಲೂ ಸಿರಿವಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಉಳಿದುಕೊಂಡಿರುವ ಆಸ್ತಿ ಎಷ್ಟು ಗೊತ್ತಾ ? :ಫೆಬ್ರವರಿ 2020ರಲ್ಲಿ,ಅನಿಲ್ ಅಂಬಾನಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು. ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು. :ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ.ಒಂದು ವಾರದ ನಂತರ ಜುಲೈ 12 ರಂದು ಮುಂಬೈನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದೆ.ಎರಡು ದಿನಗಳ ಹಿಂದೆ ಆಂಟಿಲಿಯಾದಲ್ಲಿ ಮಾಮೇರು ಆಚರಣೆ ನಡೆಯಿತು.ಈ ವೇಳೆ ಅನಿಲ್ ಅಂಬಾನಿ ತಮ್ಮ ಪತ್ನಿ ಟೀನಾ ಅಂಬಾನಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು.ಅಣ್ಣ ಮುಖೇಶ್ ಅಂಬಾನಿಗಿಂತಲೂ ಅನಿಲ್ ಅಂಬಾನಿ ಶ್ರೀಮಂತರಾಗಿದ್ದ ಕಾಲವೊಂದಿತ್ತು.ಆ ಸಮಯದಲ್ಲಿ ಅವರು ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು.2008ರಲ್ಲಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ಎಂಡಿ ಅನಿಲ್ ಅಂಬಾನಿ ಒಟ್ಟು 42 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದರು.ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಬೇರ್ಪಟ್ಟ ನಂತರ ರಿಲಯನ್ಸ್ ಗ್ರೂಪ್ ಅನ್ನು 2006ರಲ್ಲಿ ರಚಿಸಲಾಯಿತು. ಕಂಪನಿಗೆ ಹೆಗಲು ಕೊಟ್ಟ ಜೈ ಅನ್ಮೋಲ್ ಮತ್ತು ಜೈ ಅನ್ಶುಲ್ :ಫೆಬ್ರವರಿ 2020ರಲ್ಲಿ,ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡರು.ಸಾಲದ ಸುಳಿಯಲ್ಲಿ ಮುಳುಗಿ ಹೋಗಿದ್ದ ಅವರು ತಮ್ಮ ನಿವ್ವಳ ಮೌಲ್ಯವನ್ನು ಶೂನ್ಯ ಎಂದು ಘೋಷಿಸಿದರು.ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ವರದಿಯ ಪ್ರಕಾರ,ಡಿಸೆಂಬರ್ 2020ರ ಹೊತ್ತಿಗೆ,ಕಂಪನಿಯು 20,379 ಕೋಟಿ ರೂಪಾಯಿಗಳ ಬಾಕಿ ಸಾಲವನ್ನು ಹೊಂದಿದೆ.ಈಗ ಅವರ ಮಕ್ಕಳಾದ ಜೈ ಅನ್ಮೋಲ್ ಮತ್ತು ಜೈ ಅನ್ಶುಲ್ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಮಾಜಿ ಬಾಲಿವುಡ್ ನಟಿ ಟೀನಾ ಮುನಿಮ್ ಅವರನ್ನು ವಿವಾಹವಾದ ಅನಿಲ್ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಸುಮಾರು 5000 ಕೋಟಿ ರೂ. 17 ಅಂತಸ್ತಿನ ಮನೆಯನ್ನು ಹೊಂದಿದ್ದಾರೆ. ಇದಲ್ಲದೆ 311 ಕೋಟಿ ಮೌಲ್ಯದ ಖಾಸಗಿ ಜೆಟ್ ಮತ್ತು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಇದನ್ನೂ ಓದಿ : ಅನಿಲ್ ಅಂಬಾನಿಯವರ 17 ಅಂತಸ್ತಿನ ಮನೆಯ ಹೆಸರು ಎಬೋಡ್ . ಈ ನಿವಾಸದ ಛಾವಣಿಯ ಮೇಲೆ ಹೆಲಿಪ್ಯಾಡ್ ಇದ್ದು, ಅದರ ಮೇಲೆ ಹಲವಾರು ಹೆಲಿಕಾಪ್ಟರ್‌ಗಳನ್ನು ಏಕಕಾಲದಲ್ಲಿ ಇಳಿಸಬಹುದು.ಈ ಆಸ್ತಿಯು ಮೊದಲು ಬಾಂಬೆ ಉಪನಗರ) ಅಧ್ಯಕ್ಷರಿಗೆ ಸೇರಿತ್ತು.ಈ 66 ಮೀಟರ್ ಎತ್ತರದ ಮನೆಯಲ್ಲಿ ಓಪನ್ ಸ್ವಿಮಿಂಗ್ ಪೂಲ್, ಟೆರೇಸ್ ಗಾರ್ಡನ್,ಜಿಮ್ ಮತ್ತು ಹಲವಾರು ಗ್ಯಾರೇಜ್‌ಗಳಿವೆ.ಅದರ ಮೇಲಿನ ಮಹಡಿಯಿಂದ ಮುಂಬೈನ ಅದ್ಭುತ ನೋಟವನ್ನು ಕಾಣಬಹುದು.ಆರಾಮದಾಯಕವಾದ ರೆಕ್ಲೈನರ್ ಸೋಫಾಗಳು ಮತ್ತು ಎತ್ತರದ ಗಾಜಿನ ಕಿಟಕಿಗಳನ್ನು ಒಳಗೊಂಡಿರುವ ಐಷಾರಾಮಿ ಒಳಾಂಗಣಗಳೊಂದಿಗೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಈ ದಂಪತಿಯ ಒಟ್ಟು ಸಂಪತ್ತು 2500 ಕೋಟಿ ರೂ.ಗೂ ಅಧಿಕ :ಅನಿಲ್ ಮತ್ತು ಟೀನಾ ಅಂಬಾನಿ ಬೊಂಬಾರ್ಡಿಯರ್ ಗ್ಲೋಬಲ್ ಎಕ್ಸ್‌ಪ್ರೆಸ್ ಎಕ್ಸ್‌ಆರ್‌ಎಸ್ ಹೊಂದಿದ್ದಾರೆ.ವರದಿಯ ಪ್ರಕಾರ ಇದರ ಮೌಲ್ಯ 311 ಕೋಟಿ ರೂ. ಅದಲ್ಲದೆ, ಅನಿಲ್ ಮತ್ತು ಟೀನಾ ಅಂಬಾನಿ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್,ಲೆಕ್ಸಸ್ ಎಕ್ಸ್‌ಯುವಿ, ಆಡಿ ಕ್ಯೂ7 ಮತ್ತು ಮರ್ಸಿಡಿಸ್ ಜಿಎಲ್‌ಕೆ 350 ನಂತಹ ಐಷಾರಾಮಿ ಕಾರುಗಳಿವೆ.ಅನಿಲ್ ಅಂಬಾನಿ ಅವರ ಒಟ್ಟು ಸಂಪತ್ತು 249 ಕೋಟಿ ರೂ.ಗಳಾಗಿದ್ದರೆ,ವರದಿ ಪ್ರಕಾರ ಟೀನಾ ಅಂಬಾನಿ ಅವರ ಒಟ್ಟು ಸಂಪತ್ತು ಸುಮಾರು 2,331 ಕೋಟಿ ರೂ.ಒಟ್ಟಾರೆ ಈ ಜೋಡಿಯ ಒಟ್ಟು ಸಂಪತ್ತು 2,500 ಕೋಟಿ ರೂ.ಗೂ ಹೆಚ್ಚು ಆಸ್ತಿಪಾಸ್ತಿ ಇದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...