ಆಭರಣ ಪ್ರಿಯರಿಗೆ ದೊಡ್ಡ ಅಘಾತ..! ಮತ್ತಷ್ಟು ಹೆಚ್ಚಾಯ್ತು ಚಿನ್ನದ ಬೆಲೆ... : ಗುರುವಾರ ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ ಕಂಡಿದೆ. :ಗುರುವಾರ ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ ಕಂಡಿದೆ. ಬುಧವಾರ ಯಾವುದೇ ಏರಿಕೆ ಕಾಣದೆ ನಿಂತಿದ್ದ ಬಂಗಾರದ ಬೆಲೆ ಗುರುವಾರ ಬೆಳಗ್ಗೆ ದಿಡೀರನೇ ಹೆಚ್ಚಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ವಿವಿಧ ಭಾಗಗಳಲ್ಲಿ ಚಿನ್ನದ ಬೆಲೆ ಹೇಗಿದೆ..? ಬೆಂಗಳೂರಿನಲ್ಲಿ 10 ಗ್ರಾಂ ನ 24k ಚಿನ್ನ ರೂ. 70,880 ಕ್ಕೆ ಏರಿಕೆಯಾಗಿದೆ, ಬುಧವಾರ 10 ಗ್ರಾ ನ 24ಕ ಚಿನ್ನದ ಬೆಲೆ ರೂ. 70,820 ಇತ್ತು. ಇನ್ನೂ 22k ನ 10 ಗ್ರಾಂ ನ ಚಿನ್ನದ ಬೆಲೆ ಬುಧವಾರ ರೂ. 67,450 ಇತ್ತು, ಆದರೆ ಗುರವಾರ ಬೆಳಿಗ್ಗೆ 22k 10 ಗ್ರಾಂ ನ ಚಿನ್ನದ ಬೆಲೆ ರೂ. 67,500 ಗೆ ಏರಿಕೆಯಾಗಿದೆ. ಇದನ್ನೂ ಓದಿ: ಇನ್ನೂ, ಗುರುವಾರ ದೇಶದ ಪ್ರಮುಖ ಭಾಗಗಳಲ್ಲಿ ಚಿನ್ನದ ಬೆಲೆ ಕುಸಿದಿದೆ . ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಬೆಲೆ 66,490 ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,520. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,340 ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,370 ಆಗಿದೆ. ಮುಂಬೈ, ಪುಣೆ ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದ್ದು, ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಸ್ವಲ್ಪ ಹೆಚ್ಚಾಗಿದೆ, 22k 10 ಗ್ರಾಂ ನ ಚಿನ್ನದ ಬೆಲೆ ರೂ. 66,960 ಕ್ಕೆ ಏರಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 73,050 ಕ್ಕೆ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಪ್ರಸ್ತುತ 22 ಕ್ಯಾರೆಟ್ ಚಿನ್ನದ ಬೆಲೆ 66,340 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ ರೂ. 72,370 ದಾಖಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...