: ನೌಕರಿಗೆ ರಾಜೀನಾಮೆ ನೀಡಿದ ಬಳಿಕ ಇಪಿ‌ಎಫ್ ಹಿಂಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ : ನೀವು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನೀವು ನೌಕರಿಯನ್ನು ಬಿಟ್ಟ ಬಳಿಕ, ಇಲ್ಲವೇ ನಿವೃತ್ತಿಯಾದ ಬಳಿಕ ಅದರಲ್ಲಿರುವ ಮೊತ್ತವನ್ನು ಹಿಂಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ. :ಉದ್ಯೋಗಿಗಳು ತಮ್ಮ ಭವಿಷ್ಯವನ್ನು ಭದ್ರಪಡಿಸಲು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುತ್ತಾರೆ. ಯಾವುದೇ ಸಂಸ್ಥೆಯ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರಿಂದ ಸ್ಥಾಪಿಸಲಾಗಿದೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ () ನಿಂದ ನಿಯಂತ್ರಿಸಲ್ಪಡುತ್ತದೆ. ಯಾವುದೇ ಸಂಸ್ಥೆಯಲ್ಲಿ ತಿಂಗಳಿಗೆ 15,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ(ವ್ಯಕ್ತಿಯು 18 ರಿಂದ 58 ವರ್ಷ ವಯಸ್ಸಿನ) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ()ಯಲ್ಲಿ ಹೂಡಿಕೆ ಮಾಡಬಹುದು. ಇದು ಒಂದು-ಬಾರಿ ಹೂಡಿಕೆ ಯೋಜನೆಯಾಗಿಲ್ಲದ ಕಾರಣ, ಕೊಡುಗೆದಾರರಿಗೆ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡುವುದು ಸುಲಭವಾಗುತ್ತದೆ. ಆದಾಗ್ಯೂ, ಹೂಡಿಕೆದಾರರು ತಮ್ಮ ಪ್ರಸ್ತುತ ಉದ್ಯೋಗವನ್ನು ತೊರೆದ ಸಂದರ್ಭದಲ್ಲಿ, ಇಲ್ಲವೇ ನಿವೃತ್ತಿ ಬಳಿಕ ಈ ನಿಧಿಯಲ್ಲಿರುವ ಹಣವನ್ನು ಹಿಂಪಡೆಯಬಹುದು. ನಿರ್ದಿಷ್ಟ ಸಂಸ್ಥೆಗೆ ರಾಜೀನಾಮೆ ನೀಡಿದ ನಂತರ ನಿಮ್ಮ ಪಿ‌ಎಫ್ ಮೊತ್ತವನ್ನು ಹಿಂಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ...* ಉದ್ಯೋಗ ತೊರೆಯುವ ವ್ಯಕ್ತಿಯು ಒಂದು ತಿಂಗಳ ನೋಟಿಸ್ ಅವಧಿಯನ್ನು ಪೂರೈಸಿರಬೇಕು ಅಥವಾ ಆ ಸಂಸ್ಥೆಯ ನಿಯಮಾನುಸಾರ ಉದ್ಯೋಗದಾತರಿಗೆ ಅನುಗುಣವಾದ ಮೊತ್ತವನ್ನು ಪಾವತಿಸಿರಬೇಕು. * ವ್ಯಕ್ತಿಯು ತನ್ನ ಪ್ರಸ್ತುತ ಉದ್ಯೋಗದಾತರೊಂದಿಗೆ ಎರಡು ತಿಂಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಬೇಕು. * ವೈಯಕ್ತಿಕ ವಿವರಗಳನ್ನುನಲ್ಲಿ ನವೀಕರಿಸಬೇಕು. ಇದನ್ನೂ ಓದಿ- ನೌಕರರು ನಿವೃತ್ತಿ ನೀಡಿದ ಬಳಿಕ ಪಿ‌ಎಫ್ ಮೊತ್ತವನ್ನು ಹಿಂಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:ಹಂತ-1:ಪ್ರಸ್ತುತ ಉದ್ಯೋಗದಾತರಿಗೆ ಫಾರ್ಮ್ 19 ( ಸೆಟ್ಲ್‌ಮೆಂಟ್ ಫಾರ್ಮ್) ಅನ್ನು ಸಲ್ಲಿಸುವುದು. ಇಪಿ‌ಎಫ್‌ಓ ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ​​ಕಚೇರಿಯಿಂದ ಈ ಫಾರ್ಮ್ ಅನ್ನು ಸುಲಭವಾಗಿ ಪಡೆಯಬಹುದು. ಹಂತ-2:ನೀವು ಉದ್ಯೋಗವನ್ನು ಬದಲಾಯಿಸಿದರೆ, ಬಡ್ಡಿಯ ಮೇಲಿನ ತೆರಿಗೆಯನ್ನು ತಪ್ಪಿಸಲು ನಿಮ್ಮ ಹಿಂದಿನ ಉದ್ಯೋಗದಾತರಿಂದ ನಿಮ್ಮ ಪಿ‌ಎಫ್ ಖಾತೆಯನ್ನು ಹೊಸದಕ್ಕೆ ವರ್ಗಾಯಿಸಬಹುದು.ಹಂತ-3:ನಿಮ್ಮ ಪ್ರಸ್ತುತ ಉದ್ಯೋಗದಾತರಿಗೆ ಫಾರ್ಮ್ 13 ಅನ್ನು ಸಲ್ಲಿಸುವ ಮೂಲಕ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಹಂತ-4:ನಿಮ್ಮ ಪ್ರಸ್ತುತ ಉದ್ಯೋಗದಾತರು ಅಗತ್ಯವಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ ನಿಮ್ಮ ಪಿ‌ಎಫ್ ಮೊತ್ತವನ್ನು ಹಿಂಪಡೆಯುವ ವಿನಂತಿಯನ್ನು ಅನುಮೋದಿಸುತ್ತಾರೆ. ಈ ಪ್ರಕ್ರಿಯೆಯು ಫಾರ್ಮ್ ಸಲ್ಲಿಸಿದ ದಿನಾಂಕದಿಂದ ಸರಿಸುಮಾರು 20 ದಿನಗಳನ್ನು ತೆಗೆದುಕೊಳ್ಳಬಹುದು. ಹಂತ-5:ಅನುಮೋದನೆಯ ದಿನಾಂಕದಿಂದ 30 ದಿನಗಳ ನಂತರ ನಿಮ್ಮ ಸಂಗ್ರಹಿಸಿದ ಪಿ‌ಎಫ್ ಮೊತ್ತವನ್ನು ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಇದನ್ನೂ ಓದಿ- ಆನ್‌ಲೈನ್‌ನಲ್ಲಿ ಇಪಿ‌ಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಸಂಪೂರ್ಣ ಪ್ರಕ್ರಿಯೆ:>> ಮೊದಲಿಗೆ ಇಪಿ‌ಎಫ್ಒ ಪೋರ್ಟಲ್‌ಗೆ ಭೇಟಿ ನೀಡಿ ಸೈನ್ ಇನ್ ಮಾಡಲು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.>> 'ಆನ್‌ಲೈನ್ ಸೇವೆಗಳು' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಲ್ಲಿ, 'ಕ್ಲೈಮ್' ಆಯ್ಕೆಯನ್ನು ಆರಿಸಿ.>> ಮರುನಿರ್ದೇಶಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'ಪರಿಶೀಲಿಸು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.>> ಮುಂದುವರಿಸಲು 'ಹೌದು' ಕ್ಲಿಕ್ ಮಾಡಿ, ಬಳಿಕ 'ಆನ್‌ಲೈನ್ ಕ್ಲೈಮ್‌ನೊಂದಿಗೆ ಮುಂದುವರಿಯಿರಿ' ಎಂಬ ಆಯ್ಕೆಯನ್ನು ಆರಿಸಿ.>> 'ನಾನು ಅರ್ಜಿ ಸಲ್ಲಿಸಲು ಬಯಸುತ್ತೇನೆ' ಟ್ಯಾಬ್ ಅಡಿಯಲ್ಲಿ, ನೀವು ಅರ್ಜಿ ಸಲ್ಲಿಸಲು ಬಯಸುವ ವಾಪಸಾತಿ ಹಕ್ಕು ಪ್ರಕಾರವನ್ನು ಆಯ್ಕೆಮಾಡಿ.>> ಇದರಲ್ಲಿ ಪಿ‌ಎಫ್ ಅಡ್ವಾನ್ಸ್' ಫಾರ್ಮ್ ಅನ್ನು ಆಯ್ಕೆಮಾಡಿ. ಇಪಿಎಫ್‌ ಹಿಂಪಡೆಯುವಿಕೆಯ ಹಿಂದಿನ ಕಾರ್ನಾವನ್ನು ವಿವರಿಸಿ, ನಿಮ್ಮ ಅರ್ಜಿಯಲ್ಲಿ ಸಲ್ಲಿಸಿ. ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಬಹುದು.>> ಅನುಮೋದನೆಯ ನಂತರ, ಪಿ‌ಎಫ್ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...