: ಮತ್ತೆ ಹೆಚ್ಚಿದ ಚಿನ್ನದ ಬೆಲೆ, ಬಂಗಾರ ಪ್ರಿಯರಿಗೆ ಬಿಗ್‌ ಶಾಕ್‌..! :ಬುಧವಾರ ಬೆಳಗ್ಗೆ ದೇಶದಲ್ಲಿ ಮತ್ತೇ ಚಿನ್ನದ ಬೆಲೆ ಹೆಚ್ಚಾಗಿದೆ. ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಾಣದೆ ಆಗಸಕ್ಕೆ ಮೆಟ್ಟಿಲು ಹಾಕಿದಂತೆ ಏರುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ನೋಡೋಣ... :ಬುಧವಾರ ಬೆಳಗ್ಗೆ ದೇಶದಲ್ಲಿ ಮತ್ತೇ ಚಿನ್ನದ ಬೆಲೆ ಹೆಚ್ಚಾಗಿದೆ. ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಾಣದೆ ಆಗಸಕ್ಕೆ ಮೆಟ್ಟಿಲು ಹಾಕಿದಂತೆ ಏರುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ನೋಡೋಣ... ಬುಧವಾರ ದೇಶದಲ್ಲಿ ಚಿನ್ನದ ಬೆಲೆ ಏರಿಕೆಯಾಗಿ, ಬಂಗಾರ ಪ್ರಿಯರಿಗೆ ಶಾಕ್‌ ಕೊಟ್ಟಿದೆ. 22 ಕ್ರಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 10 ರೂ. ಹೆಚ್ಚಾಗಿದ್ದು, 10 ಗ್ರಾಂ ಗೆ ರೂ. 66,360 ತಲುಪಿದೆ. ಇನ್ನೂ, 24 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ 10 ಗ್ರಾಂ ಗೆ ರೂ. 10 ಹೆಚ್ಚಳ ಆಗಿದ್ದು, 10 ಗ್ರಾಂ ನ ಬೆಲೆ ರೂ. 72,390 ತಲುಪಿದೆ. ಇನ್ನೂ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಮೇಲೆ 100 ರೂ. ಗೆ ಏರಿಕೆಯಾಗಿದೆ. ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಇಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,510 ಆಗಿದೆ. ಇನ್ನೂ, 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 72,540 ಕ್ಕೆ ಏರಿದೆ. ಕೊಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ. 66,360 ಕ್ಕೆ ಏರಿಯಾಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 72,390 ರೂ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಚಿನ್ನದ ಬೆಲೆ ಗ್ರಾಂ ಗೆ 6,635 ಆಗಿದ್ದು, ನಿನ್ನೆಯೂ ಕೂಡ ಇದೇ ಬೆಲೆ ಇತ್ತು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಯಂತೆ ರೂ. 66,350 ರಲ್ಲಿ ಮುಂದುವರೆದಿದೆ. ಬೆಲೆಯಲ್ಲಿ ಏರಿಕೆಯಾಗದ ಕಾರಣ ಬೆಂಗಳೂರಿಗರು ನೆಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಚೆನ್ನೈನಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದು, 22 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 66,910 ಆಗಿದೆ. 24 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆ ರೂ. 72,990ಕ್ಕೆ ಜಿಗಿದಿದೆ. ಹೈದರಾಬಾದ್‌ನಲ್ಲಿ ಕೂಡ ಚಿನ್ನದ ಬೆಲೆ ಹೆಚ್ಚಾಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ ರೂ. 66,360 ಕ್ಕೆ ಏರಿಕೆಯಾಗಿದ್ದರೆ, 24 ಕ್ಯಾರೆಟ್‌ನ ಚಿನ್ನದ ಬೆಲೆ ರೂ. 72,390 ರೂಗೆ ಏರಿಕೆಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...