ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ಪ್ರತಿ ಜೋಡಿಗೂ ಅಂಬಾನಿ ಕುಟುಂಬ ನೀಡಿದ ಉಡುಗೊರೆ ಅಷ್ಟಿಷ್ಟಲ್ಲ !ಚಿನ್ನ, ಬೆಳ್ಳಿ, ನಗದು ಎಲ್ಲವೂ ಅಲ್ಲಿತ್ತು ! : ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರ ಕುಟುಂಬಗಳಲ್ಲದೆ,ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸಂಘಟನೆಗಳು ಭಾಗವಹಿಸಿದ್ದವು. :ಇತ್ತೀಚಿನ ದಿನಗಳಲ್ಲಿ ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.ಅನಂತ್ ಮತ್ತು ರಾಧಿಕಾ ಮದುವೆಗೂ ಮೊದಲು ಅಂಬಾನಿ ಕುಟುಂಬವು ಮಂಗಳವಾರ ಪಾಲ್ಘರ್‌ನ 50 ಜೋಡಿಗಳ ವಿವಾಹವನ್ನು ನೆರವೇರಿಸಿತು.ಈ ಕಾರ್ಯಕ್ರಮ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆಯಿತು.ಈ ಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರ ಕುಟುಂಬಗಳಲ್ಲದೆ,ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸಂಘಟನೆಗಳು ಭಾಗವಹಿಸಿದ್ದವು. ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರಲ್ಲದೆ,ಪುತ್ರ ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ, ಪುತ್ರಿ ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ ಭಾಗವಹಿಸಿದ್ದರು.ವೈರಲ್ ಆಗುತ್ತಿರುವ ಕಾರ್ಯಕ್ರಮದ ವಿಡಿಯೋದಲ್ಲಿ ಇಶಾ ಕೂಡಾ ಪೂಜೆಯಲ್ಲಿ ಪಾಲ್ಗೊಂಡು ವಿವಾಹವಾಗುತ್ತಿರುವ ಜೋಡಿಗಳಿಗೆ ಶುಭ ಕೋರಿರುವುದನ್ನು ಕಾಣಬಹುದು.ಅಂಬಾನಿ ಕುಟುಂಬಕ್ಕೆ ಈ ಕ್ಷಣ ವಿಶೇಷವಾಗಿತ್ತು.ಈ ವೇಳೆ ನೀತಾ ಅಂಬಾನಿ ನವ ವಧುವರರನ್ನು ಆಶೀರ್ವದಿಸಿದರು.ಮದುವೆಯಾದ ಪ್ರತಿಯೊಬ್ಬ ದಂಪತಿಗಳಿಗೂ ಉಡುಗೊರೆಗಳನ್ನು ನೀಡಲಾಯಿತು. ಇದನ್ನೂ ಓದಿ : ನವ ದಂಪತಿಗೆ ಉಡುಗೊರೆ :ವರದಿಯ ಪ್ರಕಾರ,ಎಲ್ಲಾ 50 ವಧು ಮತ್ತು ಅವರ ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ವಿವಾಹದ ಸಂದರ್ಭದಲ್ಲಿ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.ಮಂಗಳಸೂತ್ರ,ಉಂಗುರ,ಮೂಗುತಿ ಮುಂತಾದ ಆಭರಣಗಳಲ್ಲದೆ,ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಯಿತು. ಇದಲ್ಲದೇ ವಧುವಿಗೆ 1.01 ಲಕ್ಷ ರೂ.ಗಳ ಚೆಕ್ ಅನ್ನು ‘ಸ್ತ್ರೀಧನ’ ರೂಪದಲ್ಲಿ ನೀಡಲಾಯಿತು. ಈ ಚೆಕ್ ಅನ್ನು ವಧುವಿನ ಹೆಸರಿನಲ್ಲಿ ನೀಡಲಾಗಿದೆ. ಇದಲ್ಲದೆ,ಮದುವೆಯಾದ ದಂಪತಿಗಳಿಗೆ ಪಡಿತರ ಮತ್ತು ಗೃಹೋಪಯೋಗಿ ವಸ್ತುಗಳು,ಇಡೀ ವರ್ಷಕ್ಕೆ ಅಗತ್ಯವಾದ ಗೃಹೋಪಯೋಗಿ ಉಪಕರಣಗಳು ಮತ್ತು ಹಾಸಿಗೆಗಳನ್ನು ನೀಡಲಾಯಿತು. ಮುಗಿದ ನಂತರ ಅದ್ಧೂರಿ ಪಾರ್ಟಿಯನ್ನೂ ಏರ್ಪಡಿಸಲಾಗಿತ್ತು.ಈ ಸಮಯದಲ್ಲಿ,ವಾರ್ಲಿ ಬುಡಕಟ್ಟಿನ ಸಾಂಪ್ರದಾಯಿಕ ತಡ್ಪಾ ನೃತ್ಯವನ್ನು ಆಯೋಜಿಸಲಾಗಿತ್ತು.ಈ ಸಾಮೂಹಿಕ ವಿವಾಹ ಕಾರ್ಯಕ್ರಮದೊಂದಿಗೆ ಅನಂತ್ ಮತ್ತು ರಾಧಿಕಾ ಅವರ ‘ಶುಭ-ಲಗ್ನ’ ಕಾರ್ಯಕ್ರಮ ಆರಂಭವಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...