: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ! : ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಲು ಉತ್ತಮ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಈ ಸ್ಕೀಮ್ ನಿಮಗೆ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಬಹುದು. :ಭಾರತೀಯ ಅಂಚೆ ಕಚೇರಿ ಎಂದರೆ ಪೋಸ್ಟ್ ಆಫೀಸ್​ನಲ್ಲಿ ಹಲವು ರೀತಿಯ ಉಳಿತಾಯ ಯೋಜನೆಗಳನ್ನು ಒದಗಿಸಲಾಗುತ್ತದೆ. ಅವುಗಳಲ್ಲಿ ಕೆಲವು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಅತ್ಯುತ್ತಮ ಹೂಡಿಕೆ ಯೋಜನೆಗಳು ಎಂದು ಸಾಬೀತುಪಡಿಸುತ್ತವೆ. ಅಂತಹ ಒಂದು ಯೋಜನೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ... ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಹೆಚ್ಚು ಆದಾಯ:ನಿಮಗೆಲ್ಲರಿಗೂ ತಿಳಿದಿರುವಂತೆ( ) ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿಯನ್ನು ನೀಡಲಾಗುತ್ತದೆ. ಅದರಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನಲ್ಲಿ (ಎಸ್​ಸಿಎಸ್​ಎಸ್) ಒಮ್ಮೆಗೆ ಹಣ ಹೂಡಿಕೆ ಮಾಡುವುದರಿಂದ ತಿಂಗಳಿಗೆ ನಿಯಮಿತ ಆದಾಯವನ್ನು ಗಳಿಸಬಹುದು. ಗಮನಾರ್ಹವಾಗಿ, ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯವನ್ನು ಗಳಿಸಬಹುದು. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಮುಂದೆ ಓದಿ... ಇದನ್ನೂ ಓದಿ- ವಾಸ್ತವವಾಗಿ, ವೃತ್ತಿಪರರು, ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮ ನಿವೃತ್ತಿಯ ಜೀವನದಲ್ಲಿ ನಿಯಮಿತ ಆದಾಯವನ್ನು ಹೊಂದಲು ಬಯಸುತ್ತಾರೆ. ಅಂತಹವರಿಗಾಗಿ ಪೋಸ್ಟ್ ಆಫೀಸ್​ನ ಈ ಯೋಜನೆ ತುಂಬಾ ಲಾಭದಾಯಕವಾಗಿದೆ. ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿಯನ್ನು ಒದಗಿಸುವ ಈ ಯೋಜನೆಯ ಹೆಸರು( ). ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ ಆರಂಭಿಸಲಾಗಿರುವ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ?* ಮೊದಲೇ ತಿಳಿಸಿದಂತೆ ವಯೋವೃದ್ಧರಿಗಾಗಿ ಆರಂಭಿಸಿರುವ ಈ ಯೋಜನೆಯಲ್ಲಿ ಹಿರಿಯ ನಾಗರೀಕರಷ್ಟೇ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.* 60 ವರ್ಷ ದಾಟಿದ ಹಿರಿಯ ನಾಗರೀಕರು ( ), ಇಲ್ಲವೇ 55 ವರ್ಷ ವಯಸ್ಸು ದಾಟಿ ವಿಆರ್​ಎಸ್ ಪಡೆದವರು ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡಲಾಗುತ್ತದೆ.* ಈ ಯೋಜನೆಯಲ್ಲಿ ಕನಿಷ್ಠ 1,000 ರೂನಿಂದ 30 ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶವಿದೆ.* ಎಸ್​ಸಿಎಸ್​ಎಸ್ ಸ್ಕೀಮ್ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲೇ ಅತಿಹೆಚ್ಚು ಬಡ್ಡಿ ಒದಗಿಸುವ ಹೂಡಿಕೆ ಯೋಜನೆ. ಇದರಲ್ಲಿ ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.* ಈ ಸ್ಕೀಮ್ ಐದು ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ನಿಮಗೆ ಬೇಕೆಂದಲ್ಲಿ ಸ್ಕೀಮ್ ಅನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು.* ಹಿರಿಯ ನಾಗರೀಕರು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಗಳಿಸಬಹುದು. ಇದನ್ನೂ ಓದಿ- ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕಿಂತ ಅಧಿಕ ಆದಾಯ ಗಳಿಸುವುದು ಹೇಗೆ?ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ ( ) ನಲ್ಲಿ ಒಟ್ಟಿಗೆ 30,00,000 ರೂ. (30 ಲಕ್ಷ ರೂ.) ಹೂಡಿಕೆ ಮಾಡಿದರೆ ವರ್ಷಕ್ಕೆ 2,46,000 ರೂ. ಎಂದರೆ ತಿಂಗಳಿಗೆ 20,500 ರೂ. ಆದಾಯವನ್ನು ಗಳಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...