ಶೀಘ್ರದಲ್ಲೇ ಖಾತೆಗೆ ಬರಲಿದೆ ಬಡ್ಡಿ : ನಿಮ್ಮ ಅಕೌಂಟ್ ಅನ್ನೊಮ್ಮೆ ಹೀಗೆ ಪರಿಶೀಲಿಸಿ : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ ಕಡೆಯಿಂದ ದೊಡ್ಡ ಅಪ್ಡೇಟ್ ಇದೆ. :ಕಚೇರಿ ಕೆಲಸಗಾರರು ತಮ್ಮ ವೇತನದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ.ಕಂಪನಿಯು ಕೂಡಾ ಅದೇ ಮೊತ್ತವನ್ನು ಖಾತೆಗೆ ಠೇವಣಿ ಮಾಡುತ್ತದೆ.ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ ​​ಕಡೆಯಿಂದ ದೊಡ್ಡ ಅಪ್ಡೇಟ್ ಇದೆ. ಜುಲೈ ವೇಳೆಗೆ ​​ಸದಸ್ಯರ ಖಾತೆಗಳಿಗೆ ಪಿಎಫ್ ಮೊತ್ತದ ಮೇಲಿನ ಬಡ್ಡಿ ಹಣವನ್ನು ವರ್ಗಾಯಿಸುವ ಸಾಧ್ಯತೆ ಇದೆ.ಇದರ ಅಧಿಕೃತ ಮಾಹಿತಿಯನ್ನು ಹಣಕಾಸು ಸಚಿವಾಲಯ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ () ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ 2024 ರ ಹಣಕಾಸು ವರ್ಷಕ್ಕೆ 8.25% ಬಡ್ಡಿ ದರವನ್ನು ಅನುಮೋದಿಸಿತ್ತು.ಆದರೆ, ಈ ಬಗ್ಗೆ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಬೇಕಿದೆ.ಸಾರ್ವತ್ರಿಕ ಚುನಾವಣೆಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.ಪ್ರಸ್ತುತ ಜುಲೈ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಡ್ಡಿಯನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸದಸ್ಯರು ತಮ್ಮಅನ್ನು ನಿಯಮಿತವಾಗಿ ಪರಿಶೀಲಿಸಬಹುದು. ಚಂದಾದಾರರು ಪಾಸ್‌ಬುಕ್ ಅನ್ನು ಮಿಸ್ಡ್ ಕಾಲ್ ಅಥವಾ ಸೌಲಭ್ಯದ ಮೂಲಕವೂ ತಿಳಿದುಕೊಳ್ಳಬಹುದು. ಅಲ್ಲದೆ ​​ಪೋರ್ಟಲ್ ಮೂಲಕ ಕೂಡಾ ಪರಿಶೀಲಿಸಬಹುದು. ಇದನ್ನೂ ಓದಿ : ಪಿಎಫ್ ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು.ನೀವು ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಮತ್ತು ಆಫ್‌ಲೈನ್‌ನಲ್ಲಿ ಎಸ್‌ಎಂಎಸ್ ಅಥವಾ ಮಿಸ್ಸ್ಡ್ ಕಾಲ್ ಮೂಲಕ ಪರಿಶೀಲಿಸಬಹುದು. ೧.ಮೊದಲು,ನಲ್ಲಿ ​​ಪೋರ್ಟಲ್‌ಗೆ ಹೋಗಿ.೨.ಇದಕ್ಕಾಗಿ ನಿಮ್ಮ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ಅನ್ನು ಸಕ್ರಿಯಗೊಳಿಸಬೇಕು.೩.ಸೈಟ್ ತೆರೆದ ನಂತರ, ' ' ಟ್ಯಾಬ್‌ಗೆ ಹೋಗಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ' ' ಆಯ್ಕೆಮಾಡಿ.೪.ಸೇವಾ ಕಾಲಮ್ ಅಡಿಯಲ್ಲಿ, ' ' ಮೇಲೆ ಕ್ಲಿಕ್ ಮಾಡಿ. ೫.ಮುಂದಿನ ಪುಟದಲ್ಲಿ ನೀವು ನಿಮ್ಮ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು.೬.ಕ್ಯಾಪ್ಚಾ ನಮೂದಿಸಿ ಮತ್ತು ಲಾಗಿನ್ ಮಾಡಿ.೭.ಲಾಗ್ ಇನ್ ಮಾಡಿದ ನಂತರ, ಸದಸ್ಯರ ಅನ್ನು ಹಾಕಿ.ನಂತರ ನಿಮ್ಮ ಇಪಿಎಫ್ ಬ್ಯಾಲೆನ್ಸ್ ನಿಮಗೆ ತಿಳಿಯುತ್ತದೆ. ಉಮಾಂಗ್ ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು.೧.ಮೊದಲು ಬ್ಯಾಲೆನ್ಸ್ ಪರಿಶೀಲಿಸಲು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ.೨.ನಂತರ ಆಯ್ಕೆಯನ್ನು ಆರಿಸಿ.೩.ನಂತರ ಸಂಖ್ಯೆಯನ್ನು ನಮೂದಿಸಿ.೪.ನಿಮ್ಮ ಮೊಬೈಲ್‌ನಲ್ಲಿ ಬರುವ OTPಯನ್ನು ಹಾಕಿ.೫.ಇದಾದ ನಂತರ, ಇ-ಪಾಸ್‌ಬುಕ್ ವೀಕ್ಷಿಸಲು ಸದಸ್ಯರ ಐಡಿ ಮೇಲೆ ಕ್ಲಿಕ್ ಮಾಡಬೇಕು. ಇದನ್ನೂ ಓದಿ : 011- 22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.ಯಾವ ನಂಬರ್ ನಿಂದ ಮಿಸ್ ಚಲ್ಲಾ ಕೊಡುತ್ತಿರೂ ಅದೇ ನಂಬರಿಗೆ ಬರುತ್ತದೆ. ಇದಕ್ಕಾಗಿ ಇಪಿಎಫ್ ಖಾತೆಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ,ಬ್ಯಾಂಕ್ ಖಾತೆ ಸಂಖ್ಯೆಯನ್ನು ನಿಮ್ಮ ನೊಂದಿಗೆ ಲಿಂಕ್ ಮಾಡಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...