ಏರಿಕೆ ಕಂಡ ಚಿನ್ನದ ದರ..! ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ..? : ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಇದು ಚಿನ್ನ ಮತ್ತು ಬಂಗಾರ ಖರೀದಿಸಲು ಪ್ಲ್ಯಾನ್‌ ಮಾಡಿದ್ದವರಿಗೆ ಬಿಗ್‌ ಶಾಕ್‌ ಅಂತ ಹೇಳಬಹುದು.. ಹಾಗಿದ್ರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ..? ಬನ್ನಿ ತಿಳಿಯೋಣ.. :ಇಷ್ಟು ದಿನ ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ದೇಶದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದ್ದು, 24 ಕ್ಯಾರಟ್​ನ ಚಿನ್ನದ ಬೆಲೆ 72,160 ರುಪಾಯಿ ಇದೆ... ಪ್ರಮುಖ ನಗರಗಳಲ್ಲಿನ ಬಂಗಾರದ ಬೆಲೆ ತಿಳಿಯಲು ಮುಂದೆ ಓದಿ.. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್​ 10 ಗ್ರಾಮ್ ಚಿನ್ನದ ಬೆಲೆ 66,150 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,950 ರೂ ಇದೆ,.. ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್​ಗೆ 25 ರೂನಷ್ಟು ಕಡಿಮೆ ಆಗಿದೆ. ಇದನ್ನೂ ಓದಿ: ದೇಶದ ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ನೋಡುವುದಾದರೆ, ಬೆಂಗಳೂರು- 66,150 ರೂ., ಚೆನ್ನೈ- 66,660 ರೂ., ಮುಂಬೈ- 66,150 ರೂ., ದೆಹಲಿ- 66,300 ರೂ., ಕೋಲ್ಕತಾ- 66,150 ರೂ., ಕೇರಳ- 66,150 ರೂ. ಇದೆ. ವಿವಿಧ ಪ್ರಮುಖ ನಗರಗಳಲ್ಲಿನ ಬೆಳ್ಳಿ ದರ (100 ಗ್ರಾಮ್​ಗೆ) ನೋಡುವುದಾದರೆ, ಬೆಂಗಳೂರು- 8,950 ರೂ., ಚೆನ್ನೈ - 9,450 ರೂ., ಮುಂಬೈ- 9,000 ರೂ., ದೆಹಲಿ- 9,000 ರೂ., ಕೇರಳ - 9,450 ರೂ., ಒಟ್ಟಿನಲ್ಲಿ ಚಿನ್ನದರಲ್ಲಿ ಕೊಂಚ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...