ಬಂಗಾರ ಖರೀದಿಸಲು ಪ್ಲ್ಯಾನ್‌ ಮಾಡಿದ್ದೀರಾ..? ಇಲ್ಲಿದೆ ಇಂದಿನ ಚಿನ್ನದ ದರದ ಮಾಹಿತಿ.. : ಕಳೆದೊಂದು ವಾರದಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಶನಿವಾರ (ಜೂನ್ 29) ಕೊಂಚ ಏರಿಕೆ ಕಂಡಿದೆ. ಕಳೆದ 7 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 1,520 ಇಳಿಕೆಯಾಗಿದೆ. ಇಂದು 10ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.10ರಷ್ಟು ಏರಿಕೆಯಾಗಿದೆ. :24ಕ್ಯಾರೆಟ್ ಚಿನ್ನದ ಬೆಲೆಯೂ ರೂ.10ರಷ್ಟು ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗಿ ನಂತರ ಮತ್ತೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಬುಲಿಯನ್ ಮಾರುಕಟ್ಟೆ ತಜ್ಞರು. ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170. ಇನ್ನು ಪಕ್ಕದ ರಾಜ್ಯ ತೆಲಂಗಾಣದ ಹೈದರಾಬಾದ್ ನಲ್ಲಿ ನೋಡಿದರೆ.. ಚಿನ್ನದ ದರ ಕ್ರಮೇಣ ಕಡಿಮೆಯಾಗುತ್ತಿದೆ. ಜೂನ್ 21ರ ಚಿನ್ನದ ಬೆಲೆ ನೋಡಿದರೆ.. 22 ಕ್ಯಾರೆಟ್ ಚಿನ್ನದ ಬೆಲೆ ರೂ. 67,150, 24 ಕ್ಯಾರೆಟ್ ಚಿನ್ನದ ಬೆಲೆ ರೂ. 73,250. ಶನಿವಾರದ ಹೊತ್ತಿಗೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,160.. 24ಕ್ಯಾರೆಟ್ ಚಿನ್ನ ರೂ. 72,170 ಮುಂದುವರಿದಿದೆ. ಇದನ್ನೂ ಓದಿ: ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು :ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,310 ಮತ್ತು 24 ಕ್ಯಾರೆಟ್ ಬೆಲೆ ರೂ.72,340 ಆಗಿದೆ. ಮುಂಬೈನಲ್ಲಿ 22ಕ್ಯಾರೆಟ್ ಚಿನ್ನದ ದರ ರೂ.66,160, 24ಕ್ಯಾರೆಟ್ ರೂ.72,170, ಚೆನ್ನೈನಲ್ಲಿ 22ಕ್ಯಾರೆಟ್ ರೂ.66,670, 24ಕ್ಯಾರೆಟ್ ರೂ.72,730, ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.66,160, 24ಕ್ಯಾರೆಟ್ ರೂ. .72,170. ಬೆಳ್ಳಿ ಬೆಲೆ ಹೀಗಿದೆ :ಬೆಳ್ಳಿ ಬೆಲೆ ಕುಸಿದಿದೆ. ಶನಿವಾರ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 89,900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಸುಮಾರು ರೂ. 100ರಷ್ಟು ಕಡಿಮೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.89,900, ಮುಂಬೈನಲ್ಲಿ ರೂ.89,900, ಬೆಂಗಳೂರಿನಲ್ಲಿ ರೂ.89,400, ಚೆನ್ನೈನಲ್ಲಿ ರೂ.94,400, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.94,400 ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...