ಅನಂತ್ ಅಂಬಾನಿ - ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿ : ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ. - :ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಬಾಕ್ಸ್‌ನಲ್ಲಿರುವ ಮದುವೆ ಪತ್ರಿಕೆಯ ಜೊತೆಗೆ ಬೆಳ್ಳಿಯ ಬೆಲೆಬಾಳುವ ಗಿಫ್ಟ್‌ ಕೂಡ ಸಿಗುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜುಲೈ 12 ರಂದು ನಡೆಯಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅವರ ವಿವಾಹ ನಡೆಯಲಿದ್ದು, ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭ ಮತ್ತು ಜುಲೈ 14 ರಂದು ಸ್ವಾಗತ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಮಾರ್ಚ್‌ನಲ್ಲಿ ಅವರ ಮೊದಲ ಪ್ರಿವೆಡ್ಡಿಂಗ್‌ ಸೆಲಿಬ್ರೇಷನ್‌ ಜಾಮ್‌ನಗರದಲ್ಲಿ ನಡೆದಿತ್ತು. ಆ ಬಳಿಕ ಮೇ ಅಂತ್ಯದಲ್ಲಿ, ಎರಡನೇ ಪ್ರಿವೆಡ್ಡಿಂಗ್‌ ಸೆಲಿಬ್ರೇಷನ್‌ ಯುರೋಪ್‌ನಲ್ಲಿ ನಡೆಯಿತು. ಇದನ್ನೂ ಓದಿ: ಅನಂತ್ ಮತ್ತು ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೆಂಪು ಬಣ್ಣದ ಪೆಟ್ಟಿಗೆಯಲ್ಲಿದೆ. ಈ ಪೆಟ್ಟಿಗೆಯ ಬಾಗಿಲು ತೆರೆಯುತ್ತಿದ್ದಂತೆ ಮುಂಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ. ಈ ದೇವಾಲಯ ತೆಲಂಗಾಣದ ಕರೀಂನಗರದ ಬೆಳ್ಳಿಯ ಫಿಲಿಗ್ರೀಯ ಕಲಾಕೃತಿಯಾಗಿದೆ. ಈ ದೇವಾಲಯವನ್ನು ಹೊರತೆಗೆದಾಗ ಅದರ ಕೆಳಗಿನ ಪೆಟ್ಟಿಗೆಯು ತೆರೆಯುತ್ತದೆ. ಮದುವೆ ಕಾರ್ಡ್ ಮತ್ತು ಅತಿಥಿಗಳ ಉಡುಗೊರೆಗಳು ಅದರಲ್ಲಿವೆ. ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಅತಿಥಿಗಳು ಅನೇಕ ಉಡುಗೊರೆಗಳನ್ನು ಪಡೆದಿದ್ದಾರೆ. ಮದುವೆ ಕಾರ್ಡ್‌ ಒಂದು ಬುಕ್‌ ರೀತಿಯಿದ್ದು, ಕೈ ಯಿಂದ ಬರೆಯಲಾ ಕೆಲವು ಟಿಪ್ಪಣಿ ಗಳನ್ನ ಹೊಂದಿದೆ. ಇದಲ್ಲದೇ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಯೊಂದಿದೆ. ಅದರೊಳಗೆ ಬಟ್ಟೆಯ ತುಂಡಿನ ಮೇಲೆ & ಎಂದು ಬರೆಯಲಾಗಿದೆ. ಬೆಳ್ಳಿ ಪೆಟ್ಟಿಗೆಯಲ್ಲಿ 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಇಡಲಾಗಿದೆ. ಈ ಮದುವೆಯ ಆಮಂತ್ರಣವನ್ನು ಭಾರತೀಯ ಸಂಪ್ರದಾಯದ ಪ್ರಕಾರ ಅಲಂಕರಿಸಲಾಗಿದೆ. ಇತ್ತೀಚೆಗಷ್ಟೇ ನೀತಾ ಅಂಬಾನಿ ಕೂಡ ವಾರಣಾಸಿಗೆ ತೆರಳಿದ್ದರು. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಾಬಾ ವಿಶ್ವನಾಥ್ ಅವರನ್ನು ಮದುವೆಗೆ ಆಹ್ವಾನಿಸಿದರು. ಅಲ್ಲದೆ ಬನಾರಸ್‌ನ ಪ್ರಸಿದ್ಧ ಕಾಶಿ ಚಾಟ್ ಭಂಡಾರ್‌ಗೆ ಭೇಟಿ ನೀಡಿ ಚಾಟ್ ಅನ್ನು ಆನಂದಿಸಿದರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...