ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ : ನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ. :ಅನೇಕರಿಗೆ ತಮ್ಮದೇಯಾದ ಸ್ವಂತ ಉದ್ಯಮವನ್ನು ಶುರು ಮಾಡಬೇಕು ಅನ್ನೋ ಆಸೆ ಇರುತ್ತದೆ. ಆದರೆ ಯಾವ ಉದ್ಯಮ ಶುರು ಮಾಡಬೇಕು? ಹೇಗೆ ಶುರು ಮಾಡಬೇಕು? ಅದರಿಂದ ಲಾಭ ಪಡೆಯುವುದು ಹೇಗೆ? ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಬ್ಯುಸಿನೆಸ್‌ ಬಗ್ಗೆ ಕನಸು ಕಂಡ ಬಹುತೇಕರು ಕೈಚೆಲ್ಲಿ ಕುಳಿತುಬಿಡುತ್ತಾರೆ. ಕೆಲವರು ಮಾತ್ರ ಮುಂದುವರೆದು ಸಕ್ಸಸ್‌ ಆಗುತ್ತಾರೆ. ನೀವು ಸಹ ಯಾವುದಾದರೂ ಒಂದು ಸ್ವಂತ ಬ್ಯುಸಿನೆಸ್‌ ಮಾಡಬೇಕು ಅನ್ನೋ ಕನಸು ಹೊಂದಿದ್ದರೆ ನಾವು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ.. ಕಡಿಮೆ ಬಜೆಟ್‌ನಲ್ಲಿ ನೀವು ಈ ಬ್ಯುಸಿನೆಸ್‌ ಪ್ರಾರಂಭಿಸಿ ಕೈತುಂಬಾ ಸಂಪಾದಿಸಬಹುದು. ಈ ಬ್ಯುಸಿನೆಸ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಹುತೇಕರು ಅಮುಲ್‌ ಪ್ರಾಡಕ್ಟ್‌ಗಳನ್ನು ಬಳಸಿರುತ್ತಾರೆ. ಇದು ನಮ್ಮ ದೇಶದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳಲ್ಲಿ ಒಂದು. ಈ ಬ್ರ್ಯಾಂಡ್‌ನ ಕ್ವಾಲಿಟಿ ಬಗ್ಗೆ ಹೇಳುವ ಹಾಗಿಲ್ಲ. ದೇಶದ ಜನರಿಗೆ ಹಾಲು, ಮೊಸರು, ತುಪ್ಪ, ಐಸ್‌ಕ್ರಿಮ್‌ ಹೀಗೆ ಹಲವಾರು ಉತ್ತಮ ಪ್ರಾಡಕ್ಟ್‌ಗಳನ್ನು ಅಮುಲ್‌ ನೀಡುತ್ತಿದೆ. ನೀವು ಸಹ ಅಮುಲ್ ಫ್ರಾಂಚೈಸಿ ಪಡೆದು ನಿಮ್ಮ ಹತ್ತಿರದ ಜಾಗದಲ್ಲಿ ಬ್ಯುಸಿನೆಸ್‌ ಶುರುಮಾಡಿ ಒಳ್ಳೆಯ ಲಾಭ ಗಳಿಸಬಹುದು. ಅಮುಲ್‌ನ ಪ್ರಾಡಕ್ಟ್‌ಗಳಾದ ಹಾಲು, ಮೊಸರು, ಚೀಸ್ ಸೇರಿದಂತೆ ಹಲವಾರು ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿ ಅದರಿಂದ ಲಾಭ ಗಳಿಸಬಹುದು. ಇದನ್ನೂ ಓದಿ: ಅಮುಲ್‌ ಫ್ರಾಂಚೈಸಿ ಶುರು ಮಾಡುವುದು ಹೇಗೆ? ಫ್ರಾಂಚೈಸಿ ಪಡೆಯುವ ವಿಧಾನ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...