ನಿಮ್ಮ ಮೂಲಕವೇ ಪಡೆಯಬಹುದು 5 ಲಕ್ಷ ರೂಪಾಯಿಗಳ ವಿಮೆ !ಹಾಗಿದ್ದರೆ ಯಾವ ಕಾರ್ಡ್ ನಿಮ್ಮ ಬಳಿ ಇರಬೇಕು ? ಎಟಿಎಂ ಕಾರ್ಡ್ ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಇದನ್ನು ಕ್ಲೈಂ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಬೆಂಗಳೂರು :ನಾವು ಬ್ಯಾಂಕ್ ಖಾತೆ ತೆರೆಯುವಾಗ ಎಟಿಎಂ ಕಾರ್ಡ್ ಕೂಡಾ ಸಿಗುತ್ತದೆ. ಇದರೊಂದಿಗೆ ನಾವು ಆನ್‌ಲೈನ್ ಪಾವತಿಯಿಂದ ಹಿಡಿದು ನಗದು ಹಿಂಪಡೆಯುವಿಕೆಯವರೆಗೆ ಎಲ್ಲವನ್ನೂ ಮಾಡಬಹುದು.ಆದರೆ ನಗದು ವಹಿವಾಟಿನ ಹೊರತಾಗಿ ನಿಮ್ಮ ಎಟಿಎಂ ಕಾರ್ಡ್ ಇತರ ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ಎಟಿಎಂ ಕಾರ್ಡ್‌ನಿಂದ ಪಡೆಯಬಹುದು 5 ಲಕ್ಷದವರೆಗಿನ ವಿಮೆ :ಹೌದು,ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಎಟಿಎಂ ಕಾರ್ಡ್‌ನಲ್ಲಿ 25 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ.ಆದರೆ, ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ.ಮಾಹಿತಿಯ ಕೊರತೆಯಿಂದಾಗಿ ಈ ವಿಮೆಯ ಲಾಭ ಪಡೆಯುವುದು ಕೂಡಾ ಸಾಧ್ಯವಾಗುವುದಿಲ್ಲ. ಇದನ್ನೂ ಓದಿ : 25 ಸಾವಿರದಿಂದ 5 ಲಕ್ಷದವರೆಗೆ ವಿಮೆ :ಖಾತೆದಾರರು ಎಟಿಎಂ ಕಾರ್ಡ್‌ನಲ್ಲಿ 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಲಾಭವನ್ನು ಪಡೆಯಬಹುದು.ಆದರೆ, ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ 45 ದಿನಗಳಿಗಿಂತ ಹೆಚ್ಚು ತಮ್ಮ ಕಾರ್ಡ್ ಅನ್ನು ಬಳಸುವವರಿಗೆ ಮಾತ್ರ ಈ ಪ್ರಯೋಜನ ಲಭ್ಯವಿದೆ.ಈ ಪ್ರಯೋಜನವು ಸರ್ಕಾರಿ ಮತ್ತು ಖಾಸಗಿ ಎರಡೂಲಭ್ಯವಿದೆ. ಇಲ್ಲಿ ನೀವು ಪಡೆಯುವ ವಿಮೆಯ ಮೊತ್ತವು ನಿಮ್ಮ ಡೆಬಿಟ್ ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ.ಪ್ರತಿಯೊಂದು ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ವರ್ಗಗಳ ಕಾರ್ಡ್‌ಗಳನ್ನು ನೀಡುತ್ತದೆ.ಪ್ರತಿಯೊಂದು ಕಾರ್ಡ್ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನೂ ಓದಿ : ಕಾರ್ಡ್ ವರ್ಗದ ಮೇಲೆ ವಿಮೆ ನಿರ್ಧಾರ :ನೀವು ಪಡೆಯುವ ವಿಮೆಯ ಮೊತ್ತವು ಕಾರ್ಡ್‌ನ ವರ್ಗವನ್ನು ಅವಲಂಬಿಸಿರುತ್ತದೆ. ನಿಮ್ಮ ಕಾರ್ಡ್ ಕ್ಲಾಸಿಕ್ ವರ್ಗದಲ್ಲಿದ್ದರೆ 1 ಲಕ್ಷ ರೂಪಾಯಿ ವಿಮೆಯಾಗಿ ಸಿಗುತ್ತದೆ. ಪ್ಲಾಟಿನಂ ಕಾರ್ಡ್‌ನಲ್ಲಿ ರೂ 2 ಲಕ್ಷ ಮತ್ತು ಪ್ಲಾಟಿನಂ ಮಾಸ್ಟರ್ ಕಾರ್ಡ್‌ನಲ್ಲಿ 5 ಲಕ್ಷರೂಪಾಯಿ ವಿಮೆ ಸಿಗುತ್ತದೆ. ವೀಸಾ ಕಾರ್ಡ್‌ನಲ್ಲಿ 1.5 ರಿಂದ 2 ಲಕ್ಷ ರೂಪಾಯಿಗಳ ವಿಮೆ ಸಿಗುತ್ತದೆ. ಮಾಸ್ಟರ್ ಕಾರ್ಡ್‌ನಲ್ಲಿ 50 ಸಾವಿರ ರೂಪಾಯಿಗಳ ವಿಮಾ ರಕ್ಷಣೆ ಲಭ್ಯವಿದೆ.ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಲ್ಲಿ ಸಿಗುವ ಕಾರ್ಡ್‌ನಲ್ಲಿ ಗ್ರಾಹಕರು 1 ರಿಂದ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಕ್ಲೈಮ್ ಮಾಡುವುದು ಹೇಗೆ?:ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಸತ್ತರೆ, ಅವನ ಕುಟುಂಬವು 5 ಲಕ್ಷ ರೂಪಾಯಿಗಳವರೆಗೆ ವಿಮೆಯ ಪ್ರಯೋಜನವನ್ನು ಪಡೆಯುತ್ತದೆ. ಈ ವಿಮೆಯನ್ನು ಪಡೆದುಕೊಳ್ಳುವ ಕಾರ್ಡುದಾರರ ನಾಮಿನಿಯು ಬ್ಯಾಂಕ್ ಶಾಖೆಗೆ ಹೋಗಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ಬ್ಯಾಂಕ್‌ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ನಾಮಿನಿ ವಿಮಾ ಹಕ್ಕು ಪಡೆಯುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...