& : ಜನಸಾಮಾನ್ಯರಿಗೆ ಮತ್ತೊಂದು ಬರೆ, ಪೆಟ್ರೋಲ್‌ & ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ! : ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು () ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ ಮತ್ತು ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಹೆಚ್ಚಿಸಲಾಗಿದೆ. & :ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಮತ್ತು ಡೀಸೆಲ್‌ನ ಮೇಲಿನ ಸೆಸ್ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಶನಿವಾರ(ಜೂನ್‌ 15) ಆದೇಶ ಹೊರಡಿಸಿದೆ. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸರಾಸರಿ 3 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 3.5 ರೂ. ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು () ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ ಮತ್ತು ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಹೆಚ್ಚಿಸಲಾಗಿದೆ. ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಇದೀಗ ಪೆಟ್ರೋಲ್‌ ದರ 103.84 ರೂ. ಹಾಗೂ ಡೀಸಲ್‌ ದರ 89.43 ರೂ.ಗೆ ತಲುಪಿದೆ. ಇದನ್ನೂ ಓದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದರ ಏರಿಕೆಗೆ ಮುನ್ನ ಪ್ರತಿ ಲೀಟರ್ ಪೆಟ್ರೋಲ್ 99.84 ರೂ.ನಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ 85.93 ರೂ.ನಂತೆ ಮಾರಾಟವಾಗುತ್ತಿತ್ತು. ಇದೀಗದರಲ್ಲಿ 3 ರೂ. ಏರಿಕೆ ಮಾಡಿದ್ದರೆ, ಡೀಸೆಲ್‌ ದರದಲ್ಲಿ 3.5 ರೂ. ಹೆಚ್ಚಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...