ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ಬಂಗಾರ ಪ್ರಿಯರಿಗೆ ಇದು ಬಂಪರ್‌ ಸುದ್ದಿ! : ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. : ಚಿನ್ನದ ಬೆಲೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಮದುವೆ ಸಮಾರಂಭಗಳು ಇಲ್ಲದ ಕಾರಣ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಒಂದು ಸವರನ್‌ಗೆ 80 ಸಾವಿರವಿದ್ದ ಚಿನ್ನದ ಬೆಲೆ ಇದೀಗ ಸವರನ್‌ಗೆ ಹತ್ತು ಸಾವಿರ ಕಡಿಮೆಯಾಗುವ ಮೂಲಕ ಬಂಗಾರ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 2023ರ ಆರಂಭರದಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆ, ಚಿನ್ನ ಕೊಳ್ಳುವವರನ್ನು ಹಿಂದೇಟು ಹಾಕುವಂತೆ ಮಾಡಿತ್ತು. ಇದೀಗ ಭಾರಿ ಕುಸಿತ ಕಂಡಿರುವ ಕಾರಣ ಚಿನ್ನ ಕೊಳ್ಳುವವರಿಗೆ ಇದು ಬೆಸ್ಟ್‌ ಟೈಮ್‌ ಎಂದೇ ಹೇಳಬಹುದು. ಇದನ್ನೂ ಓದಿ: ಒಂದು ವಾರದಲ್ಲಿ ಗಮನಾರ್ಹವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಶನಿವಾರ ಕೂಡ ಕುಸಿತ ಕಂಡಿದೆ. ಇದರೊಂದಿಗೆ 22 ಕ್ಯಾರೆಟ್‌ನ ಚಿನ್ನದ ಬೆಲೆ 10 ಗ್ರಾಂ ಗೆ ರೂ. 65,890 ಆಗಿದ್ದರೆ 24 ಕ್ಯಾರೆಟ್‌ನ 10 ಗ್ರಾಂ ನ ಚಿನ್ನದ ಬೆಲೆ ರೂ. 71,880ಕ್ಕೆ ಇಳಿಕೆಯಾಗಿದೆ. ಯಾವ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ನೋಡೋಣ: ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ಆಗಿದೆ. ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 66,040 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 72,030 ಇದೆ. ಇದನ್ನೂ ಓದಿ: ಮುಂಬೈ: ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 65,890 ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ರೂ. 71,880 ರಲ್ಲಿ ಮುಂದುವರೆದಿದೆ. 1 ಬೆಳ್ಳಿ ಬೆಲೆ ಇಂತಿದೆ:ಚೆನ್ನೈ - ₹94900ಮುಂಬೈ - ₹90400ದೆಹಲಿ - ₹90400ಕೋಲ್ಕತ್ತಾ - ₹90400ಬೆಂಗಳೂರು - ₹90300ಹೈದರಾಬಾದ್ - ₹94900