: ವಾಹನ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್! : 2023ರ ಆಗಸ್ಟ್‌ 17ರಂದು ಕರ್ನಾಟಕ ಸಾರಿಗೆ ಇಲಾಖೆ ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್‌ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ. : ನಂಬರ್ ಪ್ಲೇಟ್ ಕಡ್ಡಾಯ ಡೆಡ್‌ಲೈನ್ ಅನ್ನು ರಾಜ್ಯ ಸರ್ಕಾರವು ವಿಸ್ತರಿಸಲಿದೆ. ಸೆಪ್ಟೆಂಬರ್ 15ರವರೆಗೆ ಗಡುವು ವಿಸ್ತರಿಸಿದ್ದು, ಈ ಕುರಿತು ಶೀಘ್ರವೇ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಗಡುವು ವಿಸ್ತರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದುವೇ ಫೈನಲ್ ಡೆಡ್‌ಲೈನ್ ಆಗಲಿದೆ ಎಂದು ಸಹ ಹೇಳಿದ್ದಾರೆ. ದ್ವಿಚಕ್ರ, ತ್ರಿಚಕ್ರ & ನಾಲ್ಕು ಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೂನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಜನರು ತಮ್ಮ ವಾಹನದ ಹಳೆಯ ನಂಬರ್ ಪ್ಲೇಟ್ ಯಾವುದೇ ಇದ್ದರೂ ಅದನ್ನು ತೆರವು ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಸಾರಿಗೆ ಇಲಾಖೆ ಖಡಕ ಎಚ್ಚರ ನೀಡಿದೆ. ಇದನ್ನೂ ಓದಿ: 2023ರ ಆಗಸ್ಟ್‌ 17ರಂದು ಕರ್ನಾಟಕ ಸಾರಿಗೆ ಇಲಾಖೆ ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್‌ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ. ಈ ವಿಚಾರವಾಗಿ ವಾಹನ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳಿವೆ. ಇದೇ ಕಾರಣ ಸಾರಿಗೆ ಇಲಾಖೆ ಹಲವು ಬಾರಿ ತನ್ನ ಡೆಡ್‌ಲೈನ್ ವಿಸ್ತರಿಸುತ್ತಿದೆ. 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿ ಮಾಡಲಾದ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಇದರ ನಂತರ ಖರೀದಿಸಿದ ವಾಹನಗಳಿಗೆ ಡೀಲರ್‌ಗಳೇ ನಂಬರ್ ಪ್ಲೇಟ್ ಅಳವಡಿಸಿ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ 2019ರ ಏಪ್ರಿಲ್ 1ಕ್ಕೆ ಮುನ್ನ ಖರೀದಿಸಿದ ಸುಮಾರು 2 ಕೋಟಿ ವಾಹನಗಳು ರಾಜ್ಯದಲ್ಲಿ ಚಾಲನೆಯಲ್ಲಿವೆ. ನಂಬರ್ ಪ್ಲೇಟ್ ಕಡ್ಡಾಯ ನಿರ್ಧಾರವನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ. ಆದರೆ ವಾಹನ ಮಾಲೀಕರು ಸುಲಭವಾಗಿ ತಮ್ಮ ನಂಬರ್ ಪ್ಲೇಟ್ ಬದಲಿಸಿಕೊಳ್ಳಲು ಆಗುತ್ತಿದೆ. ಮಾಹಿತಿ ತಪ್ಪಾಗಿ ನಮೂದಿಸಿರುವ ಹಲವು ಪ್ರಕರಣಗಳಿವೆ ಅಂತಾ ವಾಹನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಹನಗಳ ನಿರ್ಮಾಣ ಮಾಡಿದ ಸಂಸ್ಥೆ, ಮಾಡೆಲ್, ವಿಧ ಸೇರಿದಂತೆ ಹಲವು ಸಮಸ್ಯೆಗಳು ತಮ್ಮ ಕಾರ್ಡ್‌ನಲ್ಲಿವೆ ಅಂತಾ ವಾಹನ ಮಾಲೀಕರು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಈ ಎಲ್ಲಾ ಕಾರಣಗಳಿಂದ ನಂಬರ್ ಪ್ಲೇಟ್‌ಗಾಗಿ ನೋಂದಣಿ ಮಾಡುವ ವೇಳೆ ತೊಂದರೆಯಾಗುತ್ತಿದೆ. ಕೆಲವು ವಾಹನ ನಿರ್ಮಾಣ ಸಂಸ್ಥೆಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿವೆ. ಹೀಗಾಗಿ ಇಂತಹ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸುವುದಾದರೂ ಹೇಗೆ ಅನ್ನೋದು ವಾಹನ ಮಾಲೀಕರ ಪ್ರಶ್ನೆಯಾಗಿದೆ? ಕೆಲ ಕಂಪನಿಗಳು ತಮ್ಮಉತ್ಪಾದನೆ ನಿಲ್ಲಿಸಿ ಬಾಗಿಲು ಹಾಕಿರುವಾಗ ನಾವು ನಂಬರ್ ಪ್ಲೇಟ್ ಮಾಡಿಸಲು ಹೋಗುವುದಾದರೂ ಎಲ್ಲಿಗೆ ಅನ್ನೋ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...