ಕೋಟ್ಯಂತರ ರೈತರಿಗೆ ಸಿಹಿ ಸುದ್ದಿ : ಇನ್ನು ಮೂರು ದಿನಗಳಲ್ಲಿ ಖಾತೆಗೆ ಬೀಳಲಿದೆ 2000 ರೂಪಾಯಿ ! 17th :ಈ ಹಣವನ್ನು ಜೂನ್ 18 ರಂದು (ಮಂಗಳವಾರ) ರೈತರ ಖಾತೆಗೆ ಜಮಾ ಮಾಡಲಾಗುವುದು. ಅಂದರೆ ಇಂದಿನಿಂದ ಮೂರು ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಬರಲಿದೆ. 17th :ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಮಾಡುವ ಸಂಬಂಧ ಕಡತಕ್ಕೆ ಸಹಿ ಹಾಕಿದ್ದರು.ಇದೀಗ ರೈತರ ಖಾತೆಗೆ ಕಂತಿನ ಹಣ ಯಾವಾಗ ಬರುತ್ತದೆ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ.ಮುಂಬರುವ ವಾರದಲ್ಲಿ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.ಈ ಹಣವನ್ನು ಜೂನ್ 18 ರಂದು (ಮಂಗಳವಾರ) ರೈತರ ಖಾತೆಗೆ ಜಮಾ ಮಾಡಲಾಗುವುದು.ಅಂದರೆ ಇಂದಿನಿಂದ ಮೂರು ದಿನಗಳ ಬಳಿಕ ಅರ್ಹ ರೈತರ ಖಾತೆಗೆ ಹಣ ಬರಲಿದೆ. ಜೂನ್ 18ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ :ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರಅವರು ಜೂನ್ 18 ರಂದು, ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ.ಒಂದು ದಿನದ ಭೇಟಿಯಲ್ಲಿ ಪ್ರಧಾನಿ ರೈತರ ಸಮಾವೇಶ ಉದ್ದೇಶಿಸಿ 17ನೇ ಕಂತಿನ ಬಿಡುಗಡೆ ಮಾಡಲಿದ್ದಾರೆ.ಇದರ ಅಡಿಯಲ್ಲಿ 9.3 ರೈತರ ಖಾತೆಗಳಿಗೆ 20,000 ಕೋಟಿ ರೂ.ಯನ್ನು ರುತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ : ಏನಿದು ಪಿಎಂ ಕಿಸಾನ್ ಯೋಜನೆ? :(ಪಿಎಂ ಕಿಸಾನ್ ನಿಧಿ) ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಇದರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ.ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಾರಂಭಿಸಲಾಯಿತು.ಇದು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.ರೈತರಿಗೆ ಕೃಷಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.ಯೋಜನೆಯ ಮೂಲಕ, ಅರ್ಹ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ.ಈ ಹಣವನ್ನು ವರ್ಷವಿಡೀ ತಲಾ 2,000 ರೂ.ಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? :> ಮೊದಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.> ಈಗ ಬೆನೆಫಿಶಿಯರಿ ಸ್ಟೇಟಸ್ ಇರುವ ಆನ್‌ಲೈನ್ ಪುಟಕ್ಕೆ ಹೋಗಿ.> ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.> ಈಗ ಇಲ್ಲಿ 'ಗೆಟ್ ಡೇಟಾ ' ಬಟನ್ ಮೇಲೆ ಕ್ಲಿಕ್ ಮಾಡಿ.> ಇದರ ನಂತರ ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.> ಇದರ ನಂತರ ಪೇಮೆಂಟ್ ಸ್ಟೇಟಸ್ ಕ್ಲಿಕ್ ಮಾಡಿ.> ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬೆನೆಫಿಶಿಯರಿ ಸ್ಟೇಟಸ್ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...