: ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಬಿಗ್ ಅಪ್ಡೇಟ್ : ನೀವು ಇನ್ನೂ ಸಹ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೇ? ನಿಮಗಾಗಿ ಯುಐಡಿಎಐ ಗುಡ್ ನ್ಯೂಸ್ ಒಂದನ್ನು ನೀಡಿದೆ. ನೀವು ಆನ್‌ಲೈನ್‌ನಲ್ಲಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್ ಅಪ್‌ಡೇಟ್‌ ಮಾಡಬಹುದು. :ನೀವಿನ್ನೂ ಆಧಾರ್ ಅಪ್‌ಡೇಟ್ ಮಾಡಿಲ್ಲವೇ? ನಿಮಗಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಇನ್ನೂ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ. ವಾಸ್ತವವಾಗಿ,() ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಮೊದಲಿಗೆ, ಡಿಸೆಂಬರ್ 15, 2023ರವರೆಗೆ ಗಡುವು ನೀಡಿತ್ತು. ಬಳಿಕ ಈ ಗಡುವನ್ನು ಮಾರ್ಚ್ 14 ರವರೆಗೆ, ನಂತರ ಜೂನ್ 14 ರವರೆಗೆ ವಿಸ್ತರಿಸಲಾಗಿತ್ತು. ಅರ್ಥಾತ್, ಇಂದಿಗೆ ಉಚಿತವಾಗಿ ಆಧಾರ್ ಕಾರ್ಡ್ ನವೀಕರಿಸಲು ( ) ಅವಕಾಶವನ್ನು ನೀಡಿತ್ತು. ಇದೀಗ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಶುಲ್ಕವಿಲ್ಲದೆ ಆಧಾರ್ ಕಾರ್ಡ್ ನವೀಕರಣಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 14 ರವರೆಗೆ ಗಡುವನ್ನು ವಿಸ್ತರಿಸಿದೆ. ಇದನ್ನೂ ಓದಿ- ಪ್ರಸ್ತುತ, ಇನ್ನೂ ಮೂರು ತಿಂಗಳುಗಳ ಕಾಲ ಆನ್‌ಲೈನ್‌ನಲ್ಲಿ ಮೈಆಧಾರ್ ( ) ಪೋರ್ಟಲ್‌ನಲ್ಲಿ( ) ಮಾಡುವುದು ಉಚಿತವಾಗಿದ್ದರೂ, ಆಫ್‌ಲೈನ್ ಅಪ್‌ಡೇಟ್‌ಗಳಿಗೆ ₹ 50 ಶುಲ್ಕ ಪಾವತಿಸಬೇಕಾಗುತ್ತದೆ.ಸೆಪ್ಟೆಂಬರ್ 14 ರವರೆಗೆ, ಯುಐಡಿಎಐ ವೆಬ್‌ಸೈಟ್‌ನ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು, ವಿಳಾಸ, ಫೋಟೋ ಮತ್ತು ಇತರ ವಿವರಗಳಂತಹ ಬದಲಾವಣೆಗಳನ್ನು ಉಚಿತವಾಗಿ ನವೀಕರಿಸಬಹುದು. ಇದನ್ನೂ ಓದಿ- ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ನವೀಕರಿಸುವುದು ಹೇಗೆ?ಹಂತ 1: ಮೊದಲಿಗೆ ಆಧಾರ್ ವೆಬ್‌ಸೈಟ್‌ಗೆಗೆಭೇಟಿ ನೀಡಿ ನಿಮ್ಮ 16 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಆಗಿ.ಹಂತ 2: ನಿಗದಿತ ಜಾಗದಲ್ಲಿ ಕ್ಯಾಪ್ಚಾ ನಮೂದಿಸಿ.ಹಂತ 3: ನಿಮ್ಮ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಓಟಿಪಿ ಕೋಡ್ ನಮೂದಿಸಿ ಲಾಗಿನ್ ಕ್ಲಿಕ್ ಮಾಡಿ.ಹಂತ 4: ಮುಂದಿನ ಪುಟದಲ್ಲಿ 'ಡಾಕ್ಯುಮೆಂಟ್ ಅಪ್‌ಡೇಟ್' ಆಯ್ಕೆಮಾಡಿ . ಇದರಲ್ಲಿ ಆಧಾರ್ ಬಳಕೆದಾರರ ಅಸ್ತಿತ್ವದಲ್ಲಿರುವ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.ಹಂತ 6: ನೀವು ನವೀಕರಿಸಲು ಬಯಸುವ ವಿವರಗಳ ಅಗತ್ಯವಿರುವ ಪುರಾವೆಗಳನ್ನು ಅಪ್‌ಲೋಡ್ ಮಾಡಿ.ಹಂತ 7: ಆಧಾರ್ ನವೀಕರಿಸಿದ ಬಳಿಕ ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ ನಂತರ 'ಸಲ್ಲಿಸು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.ಹಂತ 8: 14-ಅಂಕಿಯ ಅಪ್‌ಡೇಟ್ ವಿನಂತಿ ಸಂಖ್ಯೆ () ರಚಿಸಿದ ನಂತರ ನವೀಕರಣ ವಿನಂತಿಯನ್ನು ಸ್ವೀಕರಿಸಲಾಗುತ್ತದೆ.ಹಂತ 9: ಭವಿಷ್ಯದ ಉಪಯೋಗಕ್ಕಾಗಿ ಸಂಖ್ಯೆಯನ್ನು ಸೇವ್ ಮಾಡಿಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...