ನೈಋತ್ಯ ರೈಲ್ವೆಯಿಂದ 11 ವಿಶೇಷ ರೈಲು ಸೇವೆ ರದ್ದು: ಇಲ್ಲಿದೆ ಲಿಸ್ಟ್ : ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ. :ಕೆಎಸ್‌ಆರ್ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿರ್ಮಾಣ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸುಮಾರು 11 ವಿಶೇಷ ರೈಲುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನSpecial ) ಎಂದು ನೈಋತ್ಯ ರೈಲ್ವೆಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. : , belowಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. — (@) ಇದನ್ನೂ ಓದಿ- ( ) ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ. ಇದನ್ನೂ ಓದಿ- ನೈಋತ್ಯ ರೈಲ್ವೆ ರದ್ದುಗೊಳಿಸಿರುವ ರೈಲುಗಳ ವಿವರ ಈ ಕೆಳಕಂಡಂತಿದೆ:* ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ (ಎಸ್‌ಎಂವಿಟಿ) ಬೆಂಗಳೂರು (08543) - ಜೂನ್ 16ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ (08544)- ಜೂನ್ 17ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು-ಗವಾಹಟಿ (06521)- ಜೂನ್18ರಿಂದ ಮುಂದಿನ ಆದೇಶದವರೆಗೆ* ಎಸ್ ಎಂವಿಟಿ ಬೆಂಗಳೂರು-ಮಾಲ್‌ಟೌನ್ (06565)- ಜೂನ್ 19ರಿಂದ ಮುಂದಿನ ಆದೇಶದವರೆಗೆ* ಸಂತ್ರಗಾಚ್ ಎಸ್‌ಎಂವಿಟಿ ಬೆಂಗಳೂರು (08845)- ಜೂನ್ 21ರಿಂದ ಮುಂದಿನ ಆದೇಶದವರೆಗೆ* ಮಾಲ್ಡ್‌ಟೌನ್ - ಎಸ್‌ಎಂವಿಟಿ ಬೆಂಗಳೂರು (06566)- ಜೂನ್22ರಿಂದ ಮುಂದಿನ ಆದೇಶದವರೆಗೆ* ಗುವಾಹಟಿ -ಎಸ್‌ಎಂವಿಟಿ ಬೆಂಗಳೂರು (06522) ರೈಲಗಳು ರದ್ದು ಜೂ.22ರಿಂದ ಮುಂದಿನ ಆದೇಶದವರೆಗೆ* ಎಸ್‌ಎಂವಿಟಿ ಬೆಂಗಳೂರು -ಸಂತ್ರಗಾಚ್ (08846)- ಜೂನ್ 23ರಿಂದ ಮುಂದಿನ ಆದೇಶದವರೆಗೆ ಉಳಿದಂತೆ ಗಯಾ- ಯಶವಂತಪುರ (06218) ರೈಲನ್ನು ಜೂನ್ 17ರಂದು ಒಂದು ಟ್ರಿಪ್ ಹಾಗೂ ಭಗತ್ ಕಿ ಕೋಠಿ - ಎಸ್‌ಎಂವಿಟಿ ಬೆಂಗಳೂರು ರೈಲು‌ ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು ಜೂ. 30ರಂದು ರದ್ದುಗೊಳಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...