ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.. ಗಗನಕ್ಕೇರಿದ ಬೆಳ್ಳಿ ದರ! : ಇಂದು ಬಂಗಾರದ ಬೆಲೆಯಲ್ಲಿ 426 ರೂಪಾಯಿ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿ 326 ರೂಪಾಯಿ ಏರಿಕೆ ಕಂಡು ಬಂದಿದೆ. :ದೇಶದಾದ್ಯಂತ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ನಲ್ಲಿ ಚಿನ್ನದ ದರ ಇಂದು 10 ಗ್ರಾಂಗೆ 70,912 ರೂ.ಗೆ ಇಳಿದಿದೆ. ಈ ಮೊದಲು 10 ಗ್ರಾಂ ಚಿನ್ನದ ಬೆಲೆ 71,150 ರೂಪಾಯಿ ಆಗಿತ್ತು. ಇಂದು ಬಂಗಾರದ ಬೆಲೆಯಲ್ಲಿ 426 ರೂಪಾಯಿ ಕುಸಿತ ಕಂಡಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ 326 ರೂಪಾಯಿ ಏರಿಕೆ ಕಂಡು ಬಂದಿದೆ. ದೇಶದ ಮೆಟ್ರೋಪಾಲಿಟನ್ ನಗರಗಳಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 71,820 ರೂಪಾಯಿ, ಮುಂಬೈನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 71,760 ರೂಪಾಯಿ, ಚೆನ್ನೈನಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 72,330 ರೂಪಾಯಿ, ಬೆಂಗಳೂರಿನಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 71,670 ರೂಪಾಯಿ ಆಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ನಲ್ಲಿ ಚಿನ್ನದ ಬೆಲೆ $11.80 ರಷ್ಟು ಕುಸಿದಿದೆ. ದರವು ಪ್ರತಿ ಔನ್ಸ್ ಗೆ $ 2313.20 ಆಗಿದೆ. ಬೆಳ್ಳಿಯ ಬೆಲೆ $ 0.225 ಹೆಚ್ಚಾಗಿದೆ. ಕಳೆದ ತಿಂಗಳು ಭಾರತ ಸುಮಾರು 46 ಟನ್ ಚಿನ್ನ ಖರೀದಿಸಿತ್ತು. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಿನ್ನ ಖರೀದಿದಾರನಾಗಿತ್ತು. ಈ ಅವಧಿಯಲ್ಲಿ ಭಾರತ 722 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...