8th : ಸರ್ಕಾರಿ ನೌಕರರಿಗೆ ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ, ಮೋದಿ ಸರ್ಕಾರದ ಗುಡ್ ನ್ಯೂಸ್! 8th : 8ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರು ಈ ಬಾರಿ ವಿಶೇಷ ಸವಲತ್ತು ಪಡೆಯಬಹುದು ಎನ್ನಲಾಗ್ತಿದೆ. 8th :ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಬೆನ್ನಲ್ಲೇ ಸರ್ಕಾರಿ ಉದ್ಯೋಗಿಗಳಿಗೆ ಭರ್ಜರಿ ಸುದ್ದಿಯೊಂದು ಕಾದಿದೆ. ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಭರ್ಜರಿ ಕೊಡುಗೆಯನ್ನು ನೀಡಲಿದೆ ಎನ್ನಲಾಗ್ತಿದೆ. 8 ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರು ಈ ಬಾರಿ ವಿಶೇಷ ಸವಲತ್ತು ಪಡೆಯಬಹುದು ಎನ್ನಲಾಗ್ತಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಬರುವ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗದಿದ್ದರೂ ಊಹಾಪೋಹಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: 8 ನೇ ವೇತನ ಆಯೋಗದ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಬಹುದೆಂದು ವರದಿಗಳು ಹೇಳುತ್ತಿವೆ. ಇದೇ ವೇಳೆ ಕೇಂದ್ರ ಸರ್ಕಾರಿ ನೌಕರರ ವೇತನ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ. 8ನೇ ವೇತನ ಆಯೋಗವನ್ನು ಸ್ಥಾಪಿಸಿದ ಬಳಿಕ ಪ್ರಸ್ತಾವನೆಗಳನ್ನು ಸ್ವೀಕರಿಸಲು 12 ರಿಂದ 18 ತಿಂಗಳು ತೆಗೆದುಕೊಳ್ಳುತ್ತದೆ. ಬಳಿಕ ಉದ್ಯೋಗಿಗಳ ವೇತನವು ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜತೆಗೆ ಫಿಟ್‌ಮೆಂಟ್ ಅಂಶವನ್ನೂ ಹೆಚ್ಚಿಸಬಹುದು ಎಂಬ ನಿರೀಕ್ಷೆಗಳಿವೆ. ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಈ ರೀತಿ ಫಿಟ್‌ಮೆಂಟ್ ಅಂಶ ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮೂಲ ವೇತನ ಹೆಚ್ಚಾಗಲಿದೆ. 18 ಸಾವಿರ ಮೂಲವೇತನವಾದರೆ ಫಿಟ್ ಮೆಂಟ್ ಅಂಶ ಹೆಚ್ಚಳದಿಂದ ಇದು 26 ಸಾವಿರ ರೂಪಾಯಿ ಆಗಲಿದೆ. ಇದರ ಪ್ರಕಾರ, 8 ಸಾವಿರ ಸಂಬಳ ಹೆಚ್ಚಾಗಲಿದೆ. ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ, ಆದರೆ ವರದಿಗಳ ಪ್ರಕಾರ ಹೊಸ ಕ್ಯಾಬಿನೆಟ್ ರಚನೆಯಾದ ನಂತರ, ಡಿಎ-ಡಿಆರ್ ಹೆಚ್ಚಳ ಮತ್ತು ವೇತನ ಹೆಚ್ಚಳವಾಗಲಿದೆ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...