: ಈ ಯೋಜನೆಯಡಿ ಕೇವಲ ₹500ಗೆ ಗ್ಯಾಸ್ ಸಿಲಿಂಡರ್! : ಹರಿಯಾಣ ಸಿಎಂ ನಯಾಬ್ ಸೈನಿ ಅವರ ಹೇಳಿರುವ ಪ್ರಕಾರ, ಆ ರಾಜ್ಯದ ಜನರಿಗೆ ʼಪಿಎಂ ಉಜ್ವಲ ಯೋಜನೆʼ ಅಡಿ ಇನ್ಮುಂದೆ ₹500 ರೂ.ಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. :ಕೆಲ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಎಲ್ಲರೂ ಸಹ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿರಲಿಲ್ಲ. ಸಾಮಾನ್ಯವಾಗಿ ಸಿಟಿಗಳಲ್ಲಿ ವಾಸಮಾಡುವ ಜನರು ಗ್ಯಾಸ್ ಸಿಲಿಂಡರ್ ಬಳಕೆ ಮಾಡಿ ಅಡುಗೆ ಮಾಡುತ್ತಿದ್ದರು. ಆದರೆ ಹಳ್ಳಿಗಳಲ್ಲಿ ವಾಸ ಮಾಡುವ ಜನರು ಒಲೆಗಳಲ್ಲೇ ಅಡುಗೆ ಮಾಡುತ್ತಿದ್ದರು. ಒಲೆಯಿಂದ ಬರುವ ಹೊಗೆಯಿಂದ ಆರೋಗ್ಯಕ್ಕೆ ಸಹ ಸಮಸ್ಯೆ ಆಗುತ್ತಿತ್ತು. ಈ ಕಾರಣಕ್ಕೆ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ʼಪಿಎಂ ಉಜ್ವಲ ಯೋಜನೆʼಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯನ್ನು ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಮೊದಲ ಸಾರಿ ಜಾರಿಗೆ ತರಲಾಯಿತು. ʼಉಜ್ವಲ ಯೋಜನೆʼ ಮೊದಲ ಸಾರಿ ಜಾರಿಗೆ ಬಂದು, ಜನರು ಆ ಯೋಜನೆಯ ಸೌಲಭ್ಯ ಪಡೆಯಲು ಶುರುವಾದಾಗ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುವುದರ ಜೊತೆಗೆ ಕೇವಲ 300 ರೂ.ಗೆ ಗ್ಯಾಸ್ ಸಿಲಿಂಡರ್‌ಗಳನ್ನು ಕೊಡಲಾಗುತ್ತಿತ್ತು. ಈಗಾಗಲೇ ಕೋಟ್ಯಂತರ ಕುಟುಂಬಗಳು ʼಉಜ್ವಲ ಯೋಜನೆʼಯ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆದು ಗ್ಯಾಸ್ ಕನೆಕ್ಷನ್‌ ಕೂಡ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇದೆಲ್ಲವೂ ಜನರಿಗೆ ಅನುಕೂಲ ಆಗಲಿ, ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡುವುದರ ಜೊತೆಗೆ ಅವರ ಆರೋಗ್ಯ ಕೂಡ ಚೆನ್ನಾಗಿರಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಗೆ ಸಂಬಂಧಿಸಿದ ಹಾಗೆ ಹರಿಯಾಣ ಸಿಎಂ ನಯಾಬ್‌ ಸೈನಿ ಅವರು ಹೊಸದೊಂದು ಘೋಷಣೆ ಮಾಡಿದ್ದು, ತಮ್ಮ ಜನರಿಗೆ ಗುಡ್‌ ನ್ಯೂಸ್ ನೀಡಿದ್ದಾರೆ. ‌ ಹರಿಯಾಣ ಸಿಎಂ ನಯಾಬ್‌ ಸೈನಿ ಅವರ ಹೇಳಿರುವ ಪ್ರಕಾರ, ಆ ರಾಜ್ಯದ ಜನರಿಗೆ ʼಪಿಎಂ ಉಜ್ವಲ ಯೋಜನೆʼ ಅಡಿ ಇನ್ಮುಂದೆ ₹500 ರೂ.ಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ಈ ವರ್ಷ ಅಂದರೆ 2024ರ ಮೇ 31ರಂದು ಮತ್ತೆ ಶುರುಮಾಡಲಾಗಿದೆ. ಸಿಎಂ ಅವರ ಹೇಳಿಕೆ ಪ್ರಕಾರ, ಜನರಿಗೆ 300 ರೂ. ಸಬ್ಸಿಡಿ ಸಿಗಲಿದ್ದು, ಇದು ಸರ್ಕಾರದ ಮಾತ್ರ ಸಿಗುವ ಸೌಲಭ್ಯ ಆಗಿರುತ್ತದಂತೆ. ಇದನ್ನೂ ಓದಿ: ಇದರಿಂದ ಹರಿಯಾಣ ರಾಜ್ಯದ ಜನತೆಗೆ ಅನುಕೂಲವಾಗಿದೆ ಇದು ʼಪಿಎಂ ಉಜ್ವಲ ಯೋಜನೆʼ 2.0 ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಹರಿಯಾಣ ರಾಜ್ಯದಲ್ಲಿ ಈ ಒಂದು ಸೌಲಭ್ಯ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಸಹ ಈ ಒಂದು ಸೌಲಭ್ಯ ಶುರುವಾಗಬಹುದು ಎಂಬ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...