ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ : ಸತತ ಎಂಟನೇ ಬಾರಿಗೆ ಶೇಕಡಾ 6.5ರ ಮಟ್ಟದಲ್ಲಿಯೇ ಮುಂದುವರಿಕೆ : ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ () ಬೆಂಚ್‌ಮಾರ್ಕ್ ರೆಪೊ ದರವನ್ನು ಸತತ ಎಂಟು ಬಾರಿಗೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ. :ಭಾರತೀಯ ರಿಸರ್ವ್ ಬ್ಯಾಂಕ್ () ಗವರ್ನರ್ ಶಕ್ತಿಕಾಂತ ದಾಸ್ 2024-25ರ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಇದು ಮೊದಲ ನೀತಿಯಾಗಿದೆ. ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ () ಬೆಂಚ್‌ಮಾರ್ಕ್ ರೆಪೊ ದರವನ್ನು ಸತತ ಎಂಟು ಬಾರಿಗೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ. (ಆರ್‌ಬಿಐ)ಯ ಮೂರು ದಿನಗಳ ಹಣಕಾಸು ನೀತಿ ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೊ ದರವನ್ನು ಶೇಕಡಾ 6.5 ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ರೆಪೋ ದರ ಕಡಿತದ ನಿರೀಕ್ಷೆ:ಮುಂದಿನ ಎಂಪಿಸಿ ಸಭೆ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಮುಂದಿನ ಸಭೆಯಲ್ಲೂ ರೆಪೋ ದರ ಕಡಿತದ ನಿರೀಕ್ಷೆಯಿಲ್ಲ.ಪ್ರಸ್ತುತ ಹಣದುಬ್ಬರ ದರವು ಸರ್ಕಾರ ನಿರ್ಧರಿಸಿದ ವ್ಯಾಪ್ತಿಯನ್ನು ಮೀರಿ ಹೋಗುತ್ತಿದೆ. ಹಣದುಬ್ಬರ ದರವನ್ನು ಶೇಕಡಾ 2 ರಿಂದ 4 ರ ನಡುವೆ ತರಲು ಸರ್ಕಾರವು ರಿಸರ್ವ್ ಬ್ಯಾಂಕ್‌ಗೆ ಗುರಿಯನ್ನು ನೀಡಿದೆ. 2025 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಬಹುದು ಎಂದು ತಜ್ಞರು ಭರವಸೆ ವ್ಯಕ್ಯಪಡಿಸಿದ್ದಾರೆ. ವಾರ್ಷಿಕವಾಗಿ 6 ​​ಬಾರಿ ಸಭೆಗಳು ನಡೆಯುತ್ತವೆ :ಇದು 2024-25ರ ಆರ್ಥಿಕ ವರ್ಷದ ಎರಡನೇ ಎಂಪಿಸಿ ಸಭೆಯಾಗಿದೆ.ಈ ಸಭೆಯಲ್ಲಿ, ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡುರಿಸರ್ವ್ ಬ್ಯಾಂಕ್ ಪರಿಶೀಲಿಸುತ್ತದೆ.ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು,ಆರ್‌ಬಿಐ ಬೇಡಿಕೆ,ಪೂರೈಕೆ, ಹಣದುಬ್ಬರ ಮತ್ತು ಸಾಲದಂತಹ ಅನೇಕ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಇದನ್ನೂ ಓದಿ : ನಿಮ್ಮ ಮೇಲೆ ಪರಿಣಾಮವೇನು?:ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸುವುದು ಅಥವಾ ಹೆಚ್ಚಿಸುವುದು ಬ್ಯಾಂಕ್‌ಗಳು ನೀಡುವ ಸಾಲಗಳ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ರೆಪೋ ದರ ಹೆಚ್ಚಳವಾದರೆ ಗೃಹ ಸಾಲ,ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳು ಬ್ಯಾಂಕ್‌ಗಳಿಂದ ದುಬಾರಿಯಾಗುತ್ತವೆ. . ಇದೀಗ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗದಿರುವ ಕಾರಣ ನೀವು ಸಾಲ ಕಟ್ಟುವ ಕಂತು ಅಥವಾ ಬಡ್ಡಿಯಲ್ಲಿಯೂ ಯಾವುದೇ ಬದಲಾವಣೆಯಾಗುವುದಿಲ್ಲ.ರೆಪೋ ದರ ಎಂದರೇನು? :ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರದಲ್ಲಿ ಹೆಚ್ಚಳ ಎಂದರೆ ಬ್ಯಾಂಕ್‌ಗಳು ದುಬಾರಿ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...