: ಬರೋಬ್ಬರಿ 31 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು! : ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಕಾರಣ ಸೋಮವಾರದ ವಹಿವಾಟಿನಲ್ಲಿ ಶೇ.3ರಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್‌ ಮಂಗಳವಾರದ ವಹಿವಾಟಿನಾಂತ್ಯಕ್ಕೆ 4,369.73 ಪಾಯಿಂಟ್ಸ್‌ (ಶೇ.5.74) ಕುಸಿತ ಕಂಡು 72,079.05 ತಲುಪಿದರೆ, ನಿಫ್ಟಿ 1,379.40 ಪಾಯಿಂಟ್ಸ್‌ (ಶೇ.5.93) ಕುಸಿತವಾಗಿ 21,884.50ಕ್ಕೆ ತಲುಪಿದೆ. :ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಬೆಂಬಲವಿಲ್ಲದೆ ಬಿಜೆಪಿ ಬಹುಮತ ಪಡೆಯುವಲ್ಲಿ ವೈಫಲ್ಯ ಕಂಡಿದ್ದರಿಂದ ಭಾರತೀಯ ಷೇರು ಮಹಾಪತನ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ʼಚಾರ್‌ ಸೌ ಪಾರ್‌ʼ ಕನಸು ನನಸಾಗದ ಹಿನ್ನೆಲೆ ಹಾಗೂ ಮೈತ್ರಿಕೂಟವು 300 ಸ್ಥಾನ ದಾಟದ ಹಿನ್ನೆಲೆ ಮಂಗಳವಾರ ಷೇರುಪೇಟೆ ಭಾರೀ ಕುಸಿತ ಕಂಡದೆ. ಭಾರತೀಯ ಷೇರುಪೇಟೆಯ ಸೂಚ್ಯಂಕಗಳು ಮಹಾಪತನ ಕಂಡಿದ್ದು, ಹೂಡಿಕೆದಾರರು ಬರೋಬ್ಬರಿ 31 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಮುಂಬೈ ಷೇರುಪೇಟೆ () ಸೂಚ್ಯಂಕ ಸನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ () ಸೂಚ್ಯಂಕ ನಿಫ್ಟಿ ಸುಮಾರು ಶೇ.6ರಷ್ಟು ಕುಸಿತ ಕಂಡಿವೆ. ಪರಿಣಾಮ ಹೂಡಿಕೆದಾರರು ದೊಡ್ಡಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. 2020ರ ಮಾರ್ಚ್‌ 23ರಂದು ಕೋವಿಡ್‌ ಸಾಂಕ್ರಾಮಿಕ ಉಲ್ಪಣಗೊಂಡಿದ್ದರಿಂದ ಕೇಂದ್ರ ಸರ್ಕಾರವು ಲಾಕ್‌ಡೌನ್‌ ಘೋಷಿಸಿತ್ತು. ಅಂದಿನ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ.13ರಷ್ಟು ಕುಸಿತ ಕಂಡಿದ್ದವು. 4 ವರ್ಷಗಳ ಬಳಿಕ ಇದೀಗ ಮತ್ತೆ ಷೇರುಪೇಟೆ ಸೂಚ್ಯಂಕಗಳು ತೀವ್ರ ಕುಸಿತ ಕಂಡಿವೆ. ಇದನ್ನೂ ಓದಿ: ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಕಾರಣ ಸೋಮವಾರದ ವಹಿವಾಟಿನಲ್ಲಿ ಶೇ.3ರಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್‌ ಮಂಗಳವಾರದ ವಹಿವಾಟಿನಾಂತ್ಯಕ್ಕೆ 4,369.73 ಪಾಯಿಂಟ್ಸ್‌ (ಶೇ.5.74) ಕುಸಿತ ಕಂಡು 72,079.05 ತಲುಪಿದರೆ, ನಿಫ್ಟಿ 1,379.40 ಪಾಯಿಂಟ್ಸ್‌ (ಶೇ.5.93) ಕುಸಿತವಾಗಿ 21,884.50ಕ್ಕೆ ತಲುಪಿದೆ. ಇದು ಕಳೆದ 2 ತಿಂಗಳ ಕನಿಷ್ಟ ಮಟ್ಟವಾಗಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ ಸೆನ್ಸೆಕ್ಸ್ 6,234 ಪಾಯಿಂಟ್ಸ್‌ ಇಳಿಕೆ(ಶೇ.8.15) ಕಂಡು‌ 5 ತಿಂಗಳ ಕನಿಷ್ಠ ಮಟ್ಟವಾದ 70,234 ಪಾಯಿಂಟ್ಸ್‌ಗೆ ತಲುಪಿತ್ತು. ಅದೇ ರೀತಿ ನಿಫ್ಟಿ ಸಹ 21,281.45 ಪಾಯಿಂಟ್ಸ್‌ಗೆ ಕುಸಿತ ಕಂಡು ನಂತರ ಕೊಂಚ ಚೇತರಿಸಿಕೊಂಡಿತ್ತು. ಅದಾನಿ ಷೇರುಗಳು ಮಹಾಕುಸಿತ! ಲೋಕಸಭಾ ಚುನಾವಣಾ ಫಲಿತಾಂಶದ ಕಾರಣ ಉದ್ಯಮಿ ಗೌತಮ್‌ ಅದಾನಿ ಸಮೂಹದ ಷೇರುಗಳು ಮಹಾಪತನ ಕಂಡಿವೆ. ಪರಿಣಾಮ ಒಂದೇ ದಿನ ಕಂಪನಿಗಳ ಮಾರುಕಟ್ಟೆ ಮೌಲ್ಯವು 3.64 ಲಕ್ಷ ಕೋಟಿ ರೂ.ನಷ್ಟು ಕರಗಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಗಳ ಷೇರಿನ ಮೌಲ್ಯದಲ್ಲಿ ಶೇ.16ರಷ್ಟು ಏರಿಕೆಯಾಗಿದ್ದರಿಂದ ಮಾರುಕಟ್ಟೆ ಮೌಲ್ಯವು 19.42 ಲಕ್ಷ ಕೋಟಿ ರೂ.ಗಳಷ್ಟು ದಾಟಿತ್ತು. ಆದರೆ ಮಂಗಳವಾರದ ಆರಂಭಿಕ ವಹಿವಟಿನಲ್ಲಿಯೇ ಷೇರುಗಳ ಮೌಲ್ಯ ಇಳಿಕೆ ಕಂಡಿವೆ. ಒಟ್ಟು 10 ಕಂಪನಿಗಳ ಪೈಕಿ 8 ಷೇರುಗಳ ಮೌಲ್ಯವು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿವೆ. ಅದಾನಿ ಪೋರ್ಟ್ಸ್‌ ಶೇ.21.26ರಷ್ಟು, ಅದಾನಿ ಎನರ್ಜಿ ಸೆಲ್ಯೂಷನ್ಸ್‌ ಶೇ.20, ಅದಾನಿ ಟೋಟಲ್‌ ಗ್ಯಾಸ್‌ ಶೇ.18.88, ಶೇ.18.52, ಅದಾನಿ ಪವರ್‌ ಶೇ.17.27, ಅಂಬುಜಾ ಸಿಮೆಂಟ್ಸ್‌ ಶೇ.16.88, ಎಸಿಸಿ ಶೇ.14.71 ಹಾಗೂ ಅದಾನಿ ವಿಲ್ಮರ್‌ ಷೇರು ಶೇ.9.98ರಷ್ಟು ಕುಸಿತ ಕಂಡಿವೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...