: ₹500 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ! ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ ಅಂದರೆ 5.16 ಲಕ್ಷದಷ್ಟಿದೆ. ಅದೇ ರೀತಿ ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. :ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಭಾರತೀಯ ರಿಸರ್ವ್‌ ಬ್ಯಾಂಕ್(‌) ಮಹತ್ವದ ಮಾಹಿತಿ ನೀಡಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸಂಪೂರ್ಣ ಕರೆನ್ಸಿ ಪೈಕಿ ₹500ರ ನೋಟುಗಳ ಪ್ರಮಾಣ ಶೇ.86.5ಕ್ಕೆ ಏರಿಕೆಯಾಗಿದೆ ಅಂತಾ ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಳೆದ ವರ್ಷ ಇದೇ ಅವಧಿಯಲ್ಲಿ ₹500 ಮುಖಬೆಲೆಯಪ್ರಮಾಣ ಶೇ.77.1ರಷ್ಟಿತ್ತು ಅಂತಾ ಆರ್‌ಬಿಐ ಹೇಳಿದೆ. 2023ರ ಮೇ ತಿಂಗಳಿನಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯವ ಆದೇಶದ ಬಳಿಕ ಇವುಗಳ ಪ್ರಮಾಣ ಶೇ.10.8ರಿಂದ 0.2ಕ್ಕೆ ಇಳಿದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ ಅಂದರೆ 5.16 ಲಕ್ಷದಷ್ಟಿದೆ. ಅದೇ ರೀತಿ ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಈ ಎರಡೂ ನೋಟುಗಳ ಚಲಾವಣೆಯ ಮೌಲ್ಯ ಮತ್ತು ಪ್ರಮಾಣವು ಕ್ರಮವಾಗಿ ಶೇ.3.9 ಮತ್ತು 7.8ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...