ಮೇ 31 ರೊಳಗೆ ಈ ಕೆಲಸ ಮಾಡಿಸದೇ ಹೋದಲ್ಲಿ ತೆರಬೇಕಾಗುತ್ತದೆ ಹೆಚ್ಚು ತೆರಿಗೆ : ಈ ಗಡುವನ್ನು ತಪ್ಪಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.ಮಾತ್ರವಲ್ಲ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. :ನೀವು ಇನ್ನೂ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ,ನಿಮ್ಮ ಜೇಬಿಗೆ ಆದಾಯ ತೆರಿಗೆಯ ಭಾರ ಬೀಳುವುದು ಖಂಡಿತಾ. ನೀವು ದುಪ್ಪಟ್ಟು ತೆರಿಗೆ ಪಾವತಿಸಬೇಕಾದ ಸಂದರ್ಭ ಎದುರಾಗಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಎಚ್ಚರಿಕೆ ನೀಡಿದೆ.ಜನರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಮೇ 31 ರೊಳಗೆ ಲಿಂಕ್ ಮಾಡುವಂತೆ ಸೂಚಿಸಲಾಗಿದೆ. ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಅವಶ್ಯಕ :ನೀವು ತೆರಿಗೆದಾರರಾಗಿದ್ದರೆ ಮೇ 31 ರ ಮೊದಲು ನಿಮ್ಮಅನ್ನು ಲಿಂಕ್ ಮಾಡಬೇಕು.ಈ ಗಡುವನ್ನು ತಪ್ಪಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.ಮೇ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು ಜನರಿಗೆ ಸಲಹೆ ನೀಡುವ ಮೂಲಕ ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನು ನೀಡಿದೆ. ಇದನ್ನೂ ಓದಿ : ನೀವು ಲಿಂಕ್ ಮಾಡದಿದ್ದರೆ ಏನಾಗುತ್ತದೆ? :ಆದಾಯ ತೆರಿಗೆ ಇಲಾಖೆಯ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ.ಏಪ್ರಿಲ್ 24, 2024 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ () ಹೊರಡಿಸಿದ ಸುತ್ತೋಲೆ ಪ್ರಕಾರ,ನಿಮ್ಮ ಖಾತೆಯಿಂದ ಕಡಿಮೆ ಟಿಡಿಎಸ್ ಕಡಿತವಾಗಿದ್ದು, ನೀವು ಮೇ 31 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಲ್ಲಿ ನೀವು ಹೆಚ್ಚಿನಅವಶ್ಯಕತೆ ಇಲ್ಲ. ಮಾತ್ರವಲ್ಲ ಸಿಬಿಸಿಡಿ ಪ್ರಕಾರ ಅಂತಹವರ ವಿರುದ್ಧ ಕ್ರಮ ಕೂಡಾ ಕೈಗೊಳ್ಳುವುದಿಲ್ಲ.ಅಂದರೆ, ಹೆಚ್ಚುವರಿ ತೆರಿಗೆ ಕಡಿತವನ್ನು ತಪ್ಪಿಸಬೇಕಾದರೆ, ಮೇ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ ?:ನೀವು ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು.೧.ಇದಕ್ಕಾಗಿ ನೀವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ .. ಗೆ ಹೋಗಬೇಕಾಗುತ್ತದೆ.೨. ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.೩. ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ವ್ಯಾಲಿಡೇಟ್ ಕ್ಲಿಕ್ ಮಾಡಿ.೪.ಆಧಾರ್ ಕಾರ್ಡ್‌ನಲ್ಲಿ ಬರೆದಿರುವ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.೫. ಮೊಬೈಲ್ ಸಂಖ್ಯೆಗೆ ಬಂದ ಅನ್ನು ಭರ್ತಿ ಮಾಡಿ ಮತ್ತು ಮೇಲೆ ಕ್ಲಿಕ್ ಮಾಡಿ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...