: ರೈಲಿನಲ್ಲಿ ಲೋವರ್ ಬರ್ತ್‌ ಪಡೆಯಲು ಈ ನಿಮಯಗಳನ್ನು ತಿಳಿಯಿರಿ : ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯರು, ವಯಸ್ಸಾದವರಿಗೆ ಅನುಕೂಲವಾಗಲೆಂದು ಕೆಳ ಬರ್ತ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಪಡೆಯುವುದು ಅಷ್ಟು ಸುಲಭವಲ್ಲ. :ಮಹಿಳೆಯರು, ವಯಸ್ಸಾದವರೊಂದಿಗೆ ದೂರದ ಪ್ರಯಾಣ ಕೈಗೊಳ್ಳುವಾಗ ಲೋವರ್ ಬರ್ತ್ ಪಡೆಯುವುದು ಒಳ್ಳೆಯದು. ವಾಸ್ತವವಾಗಿ, ವಯೋವೃದ್ಧರು, ಗರ್ಭಿಣಿಯರಿಗೆ ಅನುಕೂಲಕರ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ರೈಲ್ವೆ ನಿಯಮಗಳ ( ) ಅಡಿಯಲ್ಲಿ ಟಿಕೆಟ್ ಬುಕ್ ಮಾಡುವುದರಿಂದ ಸುಲಭವಾಗಿ ಲೋವರ್ ಬರ್ತ್ ಪಡೆಯಬಹುದು. ಇದಕ್ಕಾಗಿ ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು? ಎಂದು ತಿಳಿಯೋಣ... ರೈಲ್ವೆ ಲೋವರ್ ಬರ್ತ್‌ಗೆ ಸಂಬಂಧಿಸಿದ ನಿಯಮಗಳೇನು?ವಾಸ್ತವವಾಗಿ,( ) ವಯೋವೃದ್ಧರಿಗಾಗಿ ಲೋವರ್ ಬರ್ತ್‌ನಲ್ಲಿ ಆದ್ಯತೆ ಸಿಗುತ್ತದೆ. ಟಿಕೆಟ್ ಬುಕಿಂಗ್ ವೇಳೆ ಈ ಆಯ್ಕೆಯನ್ನು ಆರಿಸುವುದರಿಂದ ನಿಮ್ಮೊಂದಿಗೆ ವಯಸ್ಸಾದವರು ಇದ್ದರೆ ಅವರಿಗಾಗಿ ಲೋವರ್ ಬರ್ತ್ ( ) ಪಡೆಯುವುದು ಸುಲಭವಾಗುತ್ತದೆ. ಆದಾಗ್ಯೂ, ಸೀಟ್ ಲಭ್ಯವಿದ್ದರೆ ಮಾತ್ರವೇ ಕೆಳಗಿನ ಬರ್ತ್‌ಗಳಲ್ಲಿ ಸೀಟ್ ಪಡೆಯಬಹುದಾಗಿದೆ ಎಂದು ಇತ್ತೀಚೆಗೆ ರೈಲ್ವೆ ಇಲಾಖೆ ಟ್ವೀಟ್‌ನಲ್ಲಿ ಮಾಹಿತಿ ನೀಡಿತ್ತು. ಮೊದಲು ಬಂದವರಿಗೆ ಮೊದಲ ಆದ್ಯತೆ:ರೈಲ್ವೆ ನಿಯಮಗಳ ಪ್ರಕಾರ, ಮೊದಲು ಬಂದವರಿಗೆ ಮೊದಲು ಸೇವೆಯನ್ನು ಆಧರಿಸಿ ಬುಕ್ಕಿಂಗ್ ಸಮಯದಲ್ಲಿಅನ್ನು ನಿಗದಿಪಡಿಸಿದರೆ ಮಾತ್ರ ನೀವು ರಿಸರ್ವೇಶನ್ ಚಾಯ್ಸ್ ಬುಕ್ ಅಡಿಯಲ್ಲಿ ಟಿಕೆಟ್ ಬುಕ್ ( ) ಮಾಡಿದರೆ, ನಿಮಗೆ ಲೋವರ್ ಬರ್ತ್ ಸಿಗುತ್ತದೆ. ಇದನ್ನೂ ಓದಿ- ಲೋವರ್ ಬರ್ತ್ ಪಡೆಯಲು ರೈಲ್ವೆ ನಿಯಮಗಳು ( ):ಭಾರತೀಯ ರೈಲ್ವೆಯು ಲೋವರ್ ಬರ್ತ್ ಪಡೆಯಲು ಬಯಸುವ ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ರೂಪಿಸಿದೆ. ಆ ಪ್ರಮುಖ ನಿಯಮಗಳೆಂದರೆ...* ಪುರುಷರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಮಹಿಳೆಯರು 58 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.* ಪುರುಷರು ಮತ್ತು ಮಹಿಳೆಯರು ಒಂದೇ ಟಿಕೆಟ್‌ನಲ್ಲಿ ಪ್ರಯಾಣಿಸಬೇಕು.* ಇದಲ್ಲದೇ, 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೂ ಲೋವರ್ ಬರ್ತ್‌ಗಳಲ್ಲಿ ಆದ್ಯತೆ ಸಿಗುತ್ತದೆ.* ಗರ್ಭಿಣಿ ಮಹಿಳಾ ಪ್ರಯಾಣಿಕರು ನಿಮ್ಮೊಂದಿಗೆ ಪ್ರಯಾಣಿಸುತ್ತಿದ್ದರೆ, ಕೆಳಗಿನ ಬರ್ತ್‌ನಲ್ಲಿ ಆಕೆಗೆ ಆದ್ಯತೆ ಸಿಗುತ್ತದೆ. ರೈಲ್‌ಮಿತ್ರಾ ಪ್ರಕಾರ, ಹಿರಿಯ ನಾಗರಿಕರು ಅಥವಾ ಮಹಿಳೆಯರು ಬುಕಿಂಗ್ ಕೌಂಟರ್ ಅಥವಾ ರಿಸರ್ವೇಶನ್ ಆಫೀಸ್‌ನಿಂದ ಲೋವರ್ ಬರ್ತ್ ಸೀಟುಗಳನ್ನು ಬುಕ್ ಮಾಡಬಹುದು. ಇದಲ್ಲದೆ, ಗರ್ಭಿಣಿಯರು ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸಬೇಕು. ಇದನ್ನೂ ಓದಿ- ಲೋವರ್ ಬರ್ತ್:ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಕೋಚ್‌ಗೆ ಆರು ಲೋವರ್ ಬರ್ತ್‌ಗಳು, ಮೂರನೇ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳು ಮತ್ತು ಸೆಕೆಂಡ್ ಎಸಿಯಲ್ಲಿ ಪ್ರತಿ ಕೋಚ್‌ಗೆ ಮೂರು ಲೋವರ್ ಬರ್ತ್‌ಗಳಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...