: ನಂಬರ್‌ ಪ್ಲೇಟ್‌ ಬಗ್ಗೆ ಇಲ್ಲಿದೆ ನೋಡಿ ಬಿಗ್‌ ಅಪ್‌ಡೇಟ್! : ಪ್ರತಿಯೊಬ್ಬರೂ ಮೇ 31ರೊಳಗೆ ನಂಬರ್ ಪ್ಲೇಟ್‌ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್‌ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು. : 2019ರೊಳಗೆ ನಂಬರ್ ಪ್ಲೇಟ್ ಖರೀದಿ ಮಾಡಿರುವ ಪ್ರತಿಯೊಂದು ವಾಹನದ ಮಾಲೀಕರು ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂಗೆ ಹೋಗಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬರಬೇಕು ಎಂದು ಸಾರಿಗೆ ಇಲಾಖೆಯ ನಿಯಮಗಳು ತಿಳಿಸಿವೆ. ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ 1,000-2,000 ರೂ.ವರೆಗೆ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೀಗಾಗಿ ಈ ದೊಡ್ಡ ಮೊತ್ತದ ದಂಡದಿಂದ ತಪ್ಪಿಸಿಕೊಳ್ಳಲು ನೀವು ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಯಾಕಂದ್ರೆ ಜೂನ್ ಒಂದರ ನಂತರ ಸಹ ನಿಮ್ಮ ನಂಬರ್ ಪ್ಲೇಟ್ ಬಾರದೆ ಇದ್ದರೆ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೂ ದಂಡದಿಂದ ಬಚಾವ್ ಆಗುವ ಸಾಧ್ಯತೆಯಿದೆ. ಅದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಪ್ರತಿಯೊಬ್ಬರೂ ಮೇ 31ರೊಳಗೆ ನಂಬರ್ ಪ್ಲೇಟ್‌ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್‌ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು. ಇದನ್ನೂ ಓದಿ: ಹೀಗಾಗಿ ನಂಬರ್ ಪ್ಲೇಟ್‌ಅನ್ನು ಅಳವಡಿಸಿಕೊಳ್ಳದೆ ಹೋದರೂ ಸಹರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ ರಸೀದಿಯನ್ನು ತೋರಿಸಿದ್ರೂ ನಿಮಗೆ ರಿಯಾಯಿತಿ ದೊರಕಲಿದೆ. ಅಂದರೆ ದೊಡ್ಡ ಮೊತ್ತದ ದಂಡದಿಂದ ಪಾರಾಗಲು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ರಿಜಿಸ್ಟ್ರೇಷನ್ ಆದರೂ ಮಾಡಿಸಿಕೊಳ್ಳಲೇಬೇಕಾಗಿದೆ ಅಂತಾ ಹೇಳಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...