ಬಲು ದುಬಾರಿಯಾದ ತರಕಾರಿ : ಹೆಚ್ಚಾಯಿತು ಅಡುಗೆ ಮನೆ ಖರ್ಚು : ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಬೆಂಗಳೂರು :ರಾಜಧಾನಿಯಲ್ಲಿ ಬಿಸಿಲ ಧಗೆ ಕಡಿಮೆಯಾದರೂ ತರಕಾರಿ ದರ ಮಾತ್ರ ಇಳಿಯುತ್ತಿಲ್ಲ. ಬೆಂಗಳೂರಿನಲ್ಲಿ ವಾರದಿಂದ ವಾರಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ‌ ಕಳೆದ ವಾರಕ್ಕೆ‌‌ ಹೋಲಿಕೆ‌ ಮಾಡಿದರೆ ಈ ವಾರಬಹಳ ದುಬಾರಿಯಾಗಿದೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ.ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಈ ಮಧ್ಯೆ, ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಬಂದಂಥಹ ಬೆಳೆ ಹಾಳಾಗಿದೆ. ಹಾಗಾಗಿ ಕೈಗೆ ಬಂದ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಇದನ್ನೂ ಓದಿ : ಇನ್ನು ಹೊಸ ಬೆಳೆ ಬರುವವರೆಗೂ ತರಕಾರಿ ಬೆಲೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ. ಎಷ್ಟಿದೆ ತರಕಾರಿ ಬೆಲೆ ? :1. ಬೀನ್ಸ್ಕಳೆದ ವಾರ 100ಇಂದಿನ ದರ 1602. ನವಿಲುಕೋಸುಕಳೆದ ವಾರದ 55ಇಂದಿನ ದರ 803. ಬದನೆಕಾಯಿಕಳೆದ ವಾರ ₹60ಇಂದಿನ ದರ ₹704. ದಪ್ಪ ಮೆಣಸಿನಕಾಯಿಕಳೆದ ವಾರ ₹40ಇಂದಿನ ದರ ₹725. ಬಟಾಣಿಕಳೆದ ವಾರ ₹140ಇಂದಿನ ದರ ₹1606. ಬೆಂಡೆಕಾಯಿಕಳೆದ ವಾರ ₹40ಇಂದಿನ ದರ ₹607. ಟೊಮಾಟೋಕಳೆದ ವಾರ ₹30ಇಂದಿನ ದರ ₹408. ಆಲೂಗೆಡ್ಡೆಕಳೆದ ವಾರ ₹30ಇಂದಿನ ದರ ₹409. ಹಾಗಲಕಾಯಿಕಳೆದ ವಾರ ₹60ಇಂದಿನ ದರ ₹8210.ಸೋರೆಕಾಯಿಕಳೆದ ವಾರ ₹40ಇಂದಿನ ದರ ₹5611. ಕ್ಯಾರೇಟ್ಕಳೆದ ವಾರ ₹40ಇಂದಿನ ದರ ₹6012. ಶುಂಠಿಕಳೆದ ವಾರ ₹180ಇಂದಿನ ದರ ₹19513. ಪಡವಲಕಾಯಿಕಳೆದ ವಾರ ₹30ಇಂದಿನ ದರ ₹4714. ಗೋರಿಕಾಯಿಕಳೆದ ವಾರ ₹50ಇಂದಿನ ದರ ₹6415. ಹಸಿ ಮೆಣಸಿಕಾಯಿಕಳೆದ ವಾರ ₹80ಇಂದಿನ ದರ ₹10016. ಬಿಟ್ರೋಟ್ಕಳೆದ ವಾರ ₹40ಇಂದಿನ ದರ ₹5017. ಈರುಳ್ಳಿಕಳೆದ ವಾರ ₹20ಇಂದಿನ ದರ ₹4018. ಸೌತೆ ಕಾಯಿಕಳೆದ ವಾರ ₹30ಇಂದಿನ ದರ ₹60 ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...