ಸರ್ಕಾರಿ ನೌಕರರೇ ಗಮನಿಸಿ : ಡಿಎ ಹೆಚ್ಚಳದ ಕಾರಣ ನಿಲ್ಲಿಸಿದೆ ಈ ಪಾವತಿ ! 7th :ಇಪಿಎಫ್‌ಒ, 2024ರ ಮೇ 7ರಂದು ತನ್ನ ಇತ್ತೀಚಿನ ಅಧಿಸೂಚನೆಯ ಪ್ರಕಾರ ಉದ್ಯೋಗಿಗಳಿಗೆ ನೀಡುವ ಈ ಪಾವತಿ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. 7th :ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ.ನೌಕರರ ಭವಿಷ್ಯ ನಿಧಿ ಸಂಸ್ಥೆ () ತುಟ್ಟಿ ಭತ್ಯೆ () ಹೆಚ್ಚಳದಿಂದಾಗಿ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯಲ್ಲಿನ ಶೇಕಡಾ 25 ರಷ್ಟು ಹೆಚ್ಚಳದ ಹಿಂದಿನ ಅಧಿಸೂಚನೆಯನ್ನು ತಡೆಹಿಡಿದಿದೆ. 2024ರ ಮೇ 7ರಂದು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ, ಉದ್ಯೋಗಿಗಳಿಗೆ ನಿವೃತ್ತಿ ಮತ್ತು ಮರಣ ಗ್ರಾಚ್ಯುಟಿ ಹೆಚ್ಚಳವನ್ನು 'ಮುಂದೂಡಲು'ನಿರ್ಧರಿಸಿದೆ ಎಂದು ಹೇಳಿದೆ. ಇದನ್ನೂ ಓದಿ : ಈ ಹಿಂದೆ ಯಾವ ಅಧಿಸೂಚನೆ ಹೊರಡಿಸಲಾಗಿತ್ತು?:ಏಪ್ರಿಲ್ 30,2024 ರಂದು ಅಧಿಸೂಚನೆಯನ್ನು ಹೊರಡಿಸಿತ್ತು.ತುಟ್ಟಿಭತ್ಯೆ ಮೂಲ ವೇತನದ 50% ಕ್ಕೆ ಹೆಚ್ಚಾದಾಗ ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯನ್ನು 25% ಹೆಚ್ಚಿಸಲಾಗುತ್ತದೆ . ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ 50% ವರೆಗೆ ಪಾವತಿಸಬೇಕಾದ ತುಟ್ಟಿಭತ್ಯೆಯ ಪರಿಷ್ಕರಣೆಯಿಂದಾಗಿ,ನಿವೃತ್ತಿ ಗ್ರಾಚ್ಯುಟಿ ಮತ್ತು ಮರಣ ಗ್ರಾಚ್ಯುಟಿಯ ಗರಿಷ್ಠ ಮಿತಿಯು 25% ರಷ್ಟು ಅಂದರೆ ಈಗಿರುವ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಾಗುತ್ತದೆ ಎಂದು ​​ಹೇಳಿತ್ತು.ಆದರೆ, ಇತ್ತೀಚಿನ ಇಪಿಎಫ್‌ಒ ಹೊರಡಿಸಿದ ಇತ್ತೀಚಿನ ಅಧಿಸೂಚನೆಯ ಪ್ರಕಾರ ಪ್ರಸ್ತುತ ಸರ್ಕಾರವು ಅಂಥಹ ಯಾವುದೇ ರೀತಿಯ ಪ್ರಸ್ತಾಪವನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ : ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಎಂದರೇನು? :ಗ್ರಾಚ್ಯುಟಿ ಎಂಬುದು ಉದ್ಯೋಗದಾತರಿಂದ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಿರಂತರ ಸೇವೆಗಳಿಗಾಗಿ ಉದ್ಯೋಗಿಗೆ ನೀಡುವ ವ್ಯಾಖ್ಯಾನಿತ ಪ್ರಯೋಜನ ಯೋಜನೆಯಾಗಿದೆ.ಗ್ರಾಚ್ಯುಟಿ ಪಾವತಿ ಕಾಯಿದೆ, 1972ರ ಪ್ರಕಾರ, ಕನಿಷ್ಠ ಐದು ವರ್ಷಗಳ ಕಾಲ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಉದ್ಯೋಗಿ ಗ್ರಾಚ್ಯುಟಿ ಪಡೆಯಬಹುದು.' ಈ ವರ್ಷದ ಮಾರ್ಚ್ 7 ರಂದು ಒಟ್ಟು ಡಿಎ ಹೆಚ್ಚಳವು ಶೇಕಡಾ 50 ಕ್ಕೆ ತಲುಪಿದೆ.ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ () ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ () ಅನ್ನು ಜನವರಿ 1, 2024 ರಿಂದ 4% ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಒಟ್ಟು ಡಿಎ ಶೇ.50ಕ್ಕೆ ಏರಿಕೆಯಾಗಿದೆ.ಡಿಎ ಹೆಚ್ಚಳದ ಜೊತೆಗೆ ಸಾರಿಗೆ ಭತ್ಯೆ, ಕ್ಯಾಂಟೀನ್ ಭತ್ಯೆ ಮತ್ತು ಡೆಪ್ಯುಟೇಶನ್ ಭತ್ಯೆಯಂತಹ ಇತರ ಭತ್ಯೆಗಳನ್ನು ಸಹ ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...