ಕನ್ಫರ್ಮ್ ಟ್ರೈನ್ ಟಿಕೆಟ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ : ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ರೈಲಿನಲ್ಲಿ ಪ್ರಯಾಣಿಸಲು ಮೊದಲೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ತಿಂಗಳಿಗೆ ಮೊದಲೇ ಟಿಕೆಟ್ ಬುಕಿಂಗ್ ಮಾಡಿದರೂ ಕನ್ಫರ್ಮ್ ಟಿಕೆಟ್ ದೊರೆಯುವುದಿಲ್ಲ. ಆದರೆ, ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. :ರಜಾದಿನಗಳಿಗಾಗಿ ಯೋಚಿಸುತ್ತಿದ್ದರೆ ಈ ಸಂದರ್ಭದಲ್ಲಿ ರೈಲಿನಲ್ಲಿ ಕನ್ಫರ್ಮ್ ಸೀಟ್ ( ) ಪಡೆಯುವುದು ಅಷ್ಟು ಸುಲಭವಲ್ಲ. ಪ್ರಯಾಣದ ದಿನಾಂಕಕ್ಕಿಂತ 1 ದಿನ ಮೊದಲು ತತ್ಕಾಲ್ ಟಿಕೆಟ್ ಬುಕ್ಕಿಂಗ್ ( ) ಆಯ್ಕೆಯಿದೆ. ಆದರೆ, ಪ್ರಸ್ತುತ ತತ್ಕಾಲ್ ಟಿಕೆಟ್‌ಗಳ ( ) ಬೇಡಿಕೆ ಹೆಚ್ಚಿರುವುದರಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ಕಿಂಗ್ ಏಜೆಂಟ್‌ಗಳು ಬುಕ್ ಮಾಡುತ್ತಾರೆ ಎಂದು ಕೆಲವರು ದೂರುವುದು ಉಂಟು. ಆದರೆ, ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ರೈಲಿನಲ್ಲಿ ಪ್ರತಿ ಬಾರಿಯೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು. ಇದಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಕರೆಂಟ್ ಟಿಕೆಟ್ ( ) ಸೌಲಭ್ಯವನ್ನು ಒದಗಿಸಿದೆ. ಏನಿದು ಕರೆಂಟ್ ಟಿಕೆಟ್?ರೈಲು ಪ್ರಯಾಣಿಕರಿಗೆ ದೃಢೀಕೃತ ಟಿಕೆಟ್‌ಗಳನ್ನು ಒದಗಿಸುವ ನಿಟ್ಟಿಯಲ್ಲಿಯೂ ( ) ಕರೆಂಟ್ ಟಿಕೆಟ್ ಸೌಲಭ್ಯವನ್ನು ಒದಗಿಸಿದೆ. ಇದರಲ್ಲಿ ಪ್ರಯಾಣಿಕರು ರೈಲು ಹೊರಡುವ ನಾಲ್ಕು ಗಂಟೆಯಿಂದ 5 ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಬಹುದಾಗಿದೆ. ಇದನ್ನೂ ಓದಿ- ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಇಲ್ಲ:ಇನ್ನೊಂದು ಪ್ರಮುಖವಾದ ವಿಷಯವೆಂದರೆ ಕರೆಂಟ್ ಟಿಕೆಟ್‌ಗಳನ್ನು ಪಡೆಯಲು ಪ್ರಯಾಣಿಕರುನಂತೆ ( )ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವಟಿಸುವ ಅವಶ್ಯಕತೆಯೂ ಇರುವುದಿಲ್ಲ. ಕನ್ಫರ್ಮ್ ಟಿಕೆಟ್ ಪಡೆಯಲು ಖಚಿತ ಮಾರ್ಗ:ತತ್ಕಾಲ್ ಟಿಕೆಟ್‌ಗೆ ಹೊಲಿಸಿದರೆ ಕರೆಂಟ್ ಟಿಕೆಟ್‌ನಲ್ಲಿ ( ) ದೃಢೀಕೃತ ಟಿಕೆಟ್ ಅನ್ನು ಬುಕ್ ಮಾಡುವುದು ತುಂಬಾ ಸುಲಭ. ಗಮನಾರ್ಹ ವಿಷಯವೆಂದರೆ ಸೀಟ್ ಲಭ್ಯತೆಯನ್ನು ಅವಲಂಬಿಸಿ ನೀವು ಇದರಲ್ಲಿ ಸುಲಭವಾಗಿ ದೃಢೀಕೃತ ಟಿಕೆಟ್‌ಗಳನ್ನು ಬುಕಿಂಗ್ ಮಾಡಬಹುದು. ಇದನ್ನೂ ಓದಿ- ಕರೆಂಟ್ ಟ್ರೈನ್ ಟಿಕೆಟ್ ಅನ್ನು ಎಲ್ಲಿ? ಹೇಗೆ ಬುಕ್ ಮಾಡಬಹುದು?ಐ‌ಆರ್‌ಸಿ‌ಟಿ‌ಸಿಯ () ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ ಬುಕಿಂಗ್ ಕೌಂಟರ್‌ನಿಂದ ನೀವು ಕರೆಂಟ್ ಟ್ರೈನ್ ಟಿಕೆಟ್ ಬುಕ್ ( ) ಮಾಡಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...