2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆ 2024 : ಮತದಾನ ನಡೆಯುವ ಕ್ಷೇತ್ರಗಳಲ್ಲಿ ತಡೆರಹಿತ ಮತದಾನ ನಡೆಸುವ ಉದ್ದೇಶದಿಂದ ಅಂದು ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಹೀಗಾಗಿ ನಾಳೆ ನಡೆಯಲಿರುವ 4ನೇ ಹಂತದ ಚುನಾವಣೆಗಾಗಿ ದೇಶದ ಕೆಲವು ನಗರಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. 2024 :ಕೇಂದ್ರ ಚುನಾವಣಾ ಆಯೋಗದ () ವೇಳಾಪಟ್ಟಿಯ ಪ್ರಕಾರ 7 ಹಂತದ ಲೋಕಸಭಾ ಚುನಾವಣೆಯ ಪೈಕಿ 4ನೇ ಸುತ್ತಿನ ಮತದಾನ ಸೋಮವಾರ ಅಂದರೆ ನಾಳೆ(ಮೇ 13) ನಡೆಯಲಿದೆ. ಜೂನ್‌ 4 ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಹೊರಬೀಳಲಿದೆ. ತಡೆರಹಿತ ಮತದಾನ ಪ್ರಕ್ರಿಯೆಗಾಗಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ () ರಜಾ ಪಟ್ಟಿಯ ಪ್ರಕಾರ, ಮತದಾನ ನಿಗದಿಯಾಗಿರುವ ಕ್ಷೇತ್ರಗಳಲ್ಲಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ನಗರಗಳ ಬ್ಯಾಂಕ್‌ಗಳು ಬಂದ್!:ಮೇ 13ರ ಸೋಮವಾರಮತದಾನದ ಅಂಗವಾಗಿ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ‌ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಹೈದರಾಬಾದ್ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಾನ್ಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಕ್ಲೋಸ್‌ ಆಗಿರಲಿವೆ. 4ನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ () 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದನ್ನೂ ಓದಿ: 4ನೇ ಹಂತದ ಮತದಾನ:ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ 4ನೇ ಹಂತದ ಮತದಾನ ನಡೆಯಲಿದೆ. 5ನೇ ಹಂತದ ಮತದಾನ:ಮೇ 20ರಂದು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ನಡೆಯಲಿದೆ. ಮೇ ಬ್ಯಾಂಕ್ ರಜಾದಿನಗಳು:ಮೇ 13ರ ಸೋಮವಾರ ಮತದಾನದ ನಿಮಿತ್ತ ಆಂಧ್ರಪ್ರದೇಶದ ರಾಜ್ಯ ಸರ್ಕಾರವು ಎಲ್ಲಾ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಈ ಸರ್ಕಾರದ ನಿರ್ದೇಶನವು ಸ್ಥಳೀಯ ಸರ್ಕಾರಗಳು, ಪಂಚಾಯತ್ ಕಚೇರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ವಲಯದ ವ್ಯವಹಾರಗಳನ್ನು ಒಳಗೊಂಡಿದೆ. ಅಂದಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ , ಮತ್ತು ಎಂಬ 3 ವಿಭಾಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಘೋಷಿಸುತ್ತದೆ. ಮೇ ತಿಂಗಳಲ್ಲಿ ಬ್ಯಾಂಕ್ ರಜೆ:ಇನ್ನು ಮೇ ತಿಂಗಳಿನಲ್ಲಿ ಮಹಾರಾಷ್ಟ್ರ ದಿನ/ಮೇ ದಿನ (ಕಾರ್ಮಿಕ ದಿನ), ಲೋಕಸಭೆ ಸಾರ್ವತ್ರಿಕ ಚುನಾವಣೆ, ರವೀಂದ್ರನಾಥ ಟ್ಯಾಗೋರ್ ಜನ್ಮದಿನ, ಬಸವ ಜಯಂತಿ/ಅಕ್ಷಯ ತೃತೀಯ, , ಬುದ್ಧ ಪೂರ್ಣಿಮಾ & ನಜ್ರುಲ್ ಜಯಂತಿ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...