: ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್! : ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು. ನವದೆಹಲಿ:ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಶುಕ್ರವಾರ ಬಂದ್‌ ಆಗಿದೆ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಶೀಘ್ರವೇ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ. ಇನ್ನೂ 75ಗಳ ಹಾರಾಟ ಬಂದ್‌ ಆಗಿದ್ದರಿಂದ ಟಿಕೆಟ್‌ ಶುಲ್ಕದ ಜೊತೆಗೆ ಪ್ರಯಾಣಿಕರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿರುವ ಹಣದಿಂದ ಏರ್‌ ಇಂಡಿಯಾಗೆ ಬರೋಬ್ಬರಿ 30 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸ್ಥೆಯ ಕೆಲ ಸಿಬ್ಬಂದಿ ದಿಢೀರ್‌ ಪ್ರತಿಭಟನೆಗೆ ಮುಂದಾಗಿದ್ದರಿಂದ ಮಂಗಳವಾರದಿಂದ 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇದರ ಬೆನ್ನಲ್ಲೇ 25ಕ್ಕೂ ಹೆಚ್ಚು ಕ್ಯಾಬಿನ್‌ ಸಿಬ್ಬಂದಿಯ ವಜಾ ಆದೇಶವನ್ನು ಸಂಸ್ಥೆ ಹಿಂಪಡೆದುಕೊಂಡಿದೆ. ಶನಿವಾರ ಅಂದರೆ ಇಂದು ಸಹ 45-50 ವಿಮಾನಗಳ ಹಾರಾಟ ನಡೆಸುವುದು ಬಹುತೇಕ ಅನುಮಾನವೆಂದು ಹೇಳಲಾಗಿದೆ. ಸಿಬ್ಬಂದಿ ವಿಷಯದಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದ ಕ್ಯಾಬಿನ್‌ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು. ಇದನ್ನೂ ಓದಿ: ಎಕ್ಸ್‌ಪ್ರೆಸ್‌ ಬಳಿ 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಈ ಪೈಕಿ 2 ಸಾವಿರ ಸಿಬ್ಬಂದಿ ಕ್ಯಾಬಿನ್‌ ಒಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಟಾಪಟಿಯಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...