ಅಕ್ಷಯ ತೃತೀಯ ಎಫೆಕ್ಟ್: ಚಿನ್ನ ಖರೀದಿಗಾಗಿ ಅಂಗಡಿಗಳಿಗೆ ಮುಗಿಬಿದ್ದ ಜನ : ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಬಂಗಾರದ ಅಂಗಡಿಗಳಿಗೆ ಜನ ಬೆಳಿಗ್ಗೆಯಿಂದಲೇ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. :ನಾಡಿನಾದ್ಯಂತ ಇಂದು ಬಸವ ಜಯಂತಿಯೊಂದಿಗೆ ಅಕ್ಷಯ ತೃತೀಯ ಆಚರಣೆ ನಡೆಯುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳ ಖರೀದಿಯನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸಲು ಚಿನ್ನದಂಗಡಿಯಲ್ಲಿ ಜನಜಂಗುಳಿಯೇ ನೆರೆದಿದೆ. ಹೌದು, ಹಳೇ ಬಾಗಲಕೋಟೆ, ನವನಗರ, ವಿದ್ಯಾಗಿರಿಯ ಬಂಗಾರದ ಅಂಗಡಿಗಳಿಗೆ ಜನ ಬೆಳಿಗ್ಗೆಯಿಂದಲೇ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಇದನ್ನೂ ಓದಿ- ಇನ್ನೂ ಅಕ್ಷಯ ತೃತೀಯ ಪ್ರಯುಕ್ತ( ) 1 ತೊಲೆಗೆ 74 ಸಾವಿರಕ್ಕೆ ಏರಿದೆ. ಆದಾಗ್ಯೂ, ಅಕ್ಷಯ ತೃತೀಯಾ ದಿನದಂದು ಅಂದ್ರೆ ಇಂದು ಚಿನ್ನ ಖರೀದಿಸಿದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಭರಾಟೆ ಜೋರಾಗಿಯೇ ಇದೆ. ಕೆಲವರು ತಮ್ಮ ಶಕ್ತ್ಯಾನುಸಾರ ಚಿನ್ನ ಖರೀದಿಸಿದರೆ, ಇನ್ನೂ ಕೆಲವರು ಬೆಳ್ಳಿ ಖರೀದಿಸುತ್ತಿರುವ ದೃಶ್ಯಗಳು ಕೂಡ ಕಂಡು ಬಂದಿತು. ವಾಸ್ತವವಾಗಿ, ಅಕ್ಷಯ ತೃತೀಯ ( ) ದಿನದಂದು ಚಿನ್ನದಂತೆ ಬೆಳ್ಳಿ ಖರೀದಿಯೂ ಶುಭ ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ- ವಾಸ್ತವವಾಗಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕರೋನಾ ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ಅಕ್ಷಯ ತೃತೀಯದಂದು ಅಷ್ಟೊಂದು ವ್ಯಾಪಾರ ಇರಲಿಲ್ಲ, ಆದರೆ, ಈ ಬಾರಿ ಅಕ್ಷಯ ತೃತೀಯಕ್ಕೆ ವ್ಯಾಪಾರ ಜೋರಾಗಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...