ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ : ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆ ಗುಡ್ ನ್ಯೂಸ್ ನೀಡಿದ್ದು ಇಂದಿನಿಂದ ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದೆ. :ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಅಬಕಾರಿ ಇಲಾಖೆ ಇಂದಿನಿಂದ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ದರ ಇಳಿಕೆ ಮಾಡಲಿದೆ. ಇದರಿಂದಾಗಿ, ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆಯಾಗಲಿದ್ದು ಕಡಿಮೆ ಬೆಲೆಯಲ್ಲಿ ಇವುಗಳನ್ನು ಖರೀದಿಸಬಹುದಾಗಿದೆ. ಹೌದು, ರಾಜ್ಯದಲ್ಲಿ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್ ಗಳ ಪ್ರೀಮಿಯಂ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. ಹೀಗಾಗಿ, ಗಡಿ ಭಾಗದ( ) ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿಸುತ್ತಿದ್ದರು. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಆಗುತ್ತಿತ್ತು. ಇದನ್ನು ತಪ್ಪಿಸಲು ಇದೀಗ ರಾಜ್ಯ ಸರ್ಕಾರ ಮದ್ಯ ದರದಲ್ಲಿ ಇಳಿಕೆ ಘೋಷಿಸಿದೆ. ಇದನ್ನೂ ಓದಿ- ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗ್ತಿದ್ದ ನಷ್ಟ ತಗ್ಗಿಸಲು( )ಮಾಡಲು ಚಿಂತಿಸಿದ್ದ ಸರ್ಕಾರ ಜುಲೈ 01ರಿಂದಲೇ ಮದ್ಯ ದರ ಇಳಿಕೆಗೆ ಮುಂದಾಗಿತ್ತು. ಆದರೆ, ನಾನಾ ಕಾರಣಗಳಿಂದ ಮದ್ಯದ ದರ ಇಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರದ ಅನುಮತಿ ಮೇರೆಗೆ ಇಂದಿನಿಂದ ಅಬಕಾರಿ ಇಲಾಖೆ ಮದ್ಯ ದರ ಇಳಿಕೆ ಮಾಡಿರುವುದು ಮದ್ಯ ಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಇದನ್ನೂ ಓದಿ- ಇಂದಿನಿಂದ ಅನ್ವಯವಾಗುವಂತೆ ಪ್ರೀಮಿಯಂ ಬ್ರ್ಯಾಂಡ್ ಗಳ ನೂತನ ಪರಿಷ್ಕತ ದರ ಪಟ್ಟಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...