: ರೈಲು ಪ್ರಯಾಣದ ವೇಳೆ ಈ ತಪ್ಪು ಮಾಡಿದರೆ ದಂಡ ಗ್ಯಾರಂಟಿ : ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್‌ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. : ದೇಶಾದ್ಯಂತ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೆ ಆರ್ಥಿಕವಾಗಿಯೂ ಕೂಡ ಜನಸಾಮಾನ್ಯರ ಕೈ ಎಟುಕುವಂತಿದೆ. ಆದಾಗ್ಯೂ, ಇನ್ನೂ ಸಹ ಅನೇಕ ಜನರು ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುತ್ತಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್‌ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. ಕೇವಲ ಎರಡೇ ದಿನದಲ್ಲಿ 3.40 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ ಬ್ಯಾಟ್‌ಮ್ಯಾನ್ 2.0:ರಾತ್ರಿಯ ಸಮಯದಲ್ಲಿಮಾಡುವುದನ್ನು ತಡೆಯುವ ಗುರಿಯೊಂದಿಗೆ ಪಶ್ಚಿಮ ರೈಲ್ವೇಯು "ಬ್ಯಾಟ್‌ಮ್ಯಾನ್ 2.0"( 2.0) ಟಿಕೆಟ್ ತಪಾಸಣೆ ಅಭಿಯಾನವನ್ನು ಆರಂಭಿಸಿದೆ. ಈ ಉಪಕ್ರಮವು ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುವುದನ್ನು ಅಥವಾ ಉನ್ನತ ದರ್ಜೆಯಲ್ಲಿ ಪ್ರಯಾಣಿಸುವುದನ್ನು ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಈ ಕೃತ್ಯ ಎಸಗುವುದನ್ನು ತಡೆಯುತ್ತದೆ. ಈ ಉಪಕ್ರಮದ ಅಡಿಯಲ್ಲಿ, ಕೇವಲ ಎರಡೇ ದಿನದಲ್ಲಿ ಮಧ್ಯರಾತ್ರಿಯಲ್ಲಿ ಬ್ಯಾಟ್‌ಮ್ಯಾನ್ ತಂಡವು ಅಂದಾಜು 3.40 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಿದೆ. ಇದನ್ನೂ ಓದಿ- ( ) ಹಿರಿಯ ವಾಣಿಜ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಗೃತ ಟಿಕೆಟ್ ತಪಾಸಣೆ ತಂಡವು ಏಪ್ರಿಲ್, 2024 ರಲ್ಲಿ ಹಲವಾರು ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಿತು. ಇದರ ಪರಿಣಾಮವಾಗಿ 20.84 ಕೋಟಿ ರೂಪಾಯಿಗಳನ್ನು ವಸೂಲು ಮಾಡಲಾಗಿದೆ, ಇದರಲ್ಲಿ ಮುಂಬೈ ಉಪನಗರ ವಿಭಾಗದಿಂದ 5.57 ಕೋಟಿ ರೂ. ವಸೂಲಿಯಾಗಿದೆ ಎಂದು ತಿಳಿದುಬಂದಿದೆ. ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಈ ಕುರಿತಂತೆ ಮಾಹಿತಿ ನೀಡಿದ್ದು, ಬುಕ್ ಮಾಡದ ಲಗೇಜ್ ಪ್ರಕರಣಗಳು ಸೇರಿದಂತೆ 2.94 ಲಕ್ಷ ಟಿಕೆಟ್ ರಹಿತ/ಅನಿಯಮಿತ ಪ್ರಯಾಣಿಕರನ್ನು ಪತ್ತೆಹಚ್ಚುವ ಮೂಲಕ 20.84 ಕೋಟಿ ರೂ. ದಂಡವನ್ನು () ವಸೂಲಿ ಮಾಡಲಾಗಿದೆ. ಇದಲ್ಲದೆ, ಏಪ್ರಿಲ್ ತಿಂಗಳಲ್ಲಿ, ಪಶ್ಚಿಮ ರೈಲ್ವೆ ಮುಂಬೈ ಉಪನಗರ ವಿಭಾಗದಲ್ಲಿ 98 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಿ 5.57 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ- ಎಸಿ ಸ್ಥಳೀಯ ರೈಲುಗಳಿಗೆ ಅನಧಿಕೃತ ಪ್ರವೇಶವನ್ನು ತಡೆಗಟ್ಟಲು ನಿಯಮಿತ ಅನಿರೀಕ್ಷಿತ ಟಿಕೆಟ್ ತಪಾಸಣೆ ಡ್ರೈವ್‌ಗಳನ್ನು ನಡೆಸಲಾಗುತ್ತದೆ. ಈ ಅಭಿಯಾನಗಳ ಪರಿಣಾಮವಾಗಿ, ಏಪ್ರಿಲ್ 2024 ರಲ್ಲಿ 4000 ಕ್ಕೂ ಹೆಚ್ಚು ಅನಧಿಕೃತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ಒಟ್ಟು. 13.71 ಲಕ್ಷ ರೂ.ಗಳನ್ನು ದಂಡವಾಗಿ ವಸೂಲು ಮಾಡಲಾಗಿದೆ. ವಾಸ್ತವವಾಗಿ, ರೈಲಿನಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವುದು ತಪ್ಪಷ್ಟೇ ಅಲ್ಲ ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೂ ಆಗಿದೆ. ಇದಕ್ಕಾಗಿ, ಕಾನೂನಿನಲ್ಲಿ ದಂಡ, ಜೈಲು ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...