ಲೋನ್ ಡೀಫಾಲ್ಟರ್ ಆಗುವ ಭಯ ಇನ್ನಿಲ್ಲ : ಪಾವತಿಸುವ ಮುನ್ನ RBIಯ ಈ ನಿಯಮವನ್ನು ತಿಳಿದುಕೊಳ್ಳಿ ! : ರೂಪಿಸಿರುವ ಈ ನಿಯಮವು ನಿಮ್ಮನ್ನು ಲೋನ್ ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ. ಮಾತ್ರವಲ್ಲ ಸಾಲದ ಬಡ್ಡಿ ಅಥವಾ ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. :ನೀವು ಯಾವುದೇ ರೀತಿಯ ಸಾಲವನ್ನು ಅಂದರೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು ಅದರ ಕಂತುಗಳನ್ನು ಪಾವತಿಸಲು ನಿಮಗೆ ಕಷ್ಟವಾಗಿದ್ದರೆ,RBIಯ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಒಳ್ಳೆಯದು.ಸಾಲದ ಕಂತು ಪಾವತಿಸದೇ ಡೀಫಾಲ್ಟರ್ ಎಂದೆನಿಸಿಕೊಳ್ಳುವುದಕ್ಕಿಂತ ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ನಿಯಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಈ ನಿಯಮವು ನಿಮ್ಮನ್ನು ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ.ನಿಮ್ಮ ಸಾಲದ ಬಡ್ಡಿ ಅಥವಾ ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ. ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್ () ದೇಶದ ಜನರ ಸಾಲ ಅಥವಾಬಳಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.ಕಳೆದ ವರ್ಷ ಇದು ನೀಡಿದ ವರದಿಯಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ.ಇದರಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಜನರಿಗೆ ಯಾವ ರೀತಿಯಲ್ಲಿ ಹೊರೆಯಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ಪರಿಹಾರ ನೀಡುತ್ತವೆ ನಿಯಮಗಳು :ಸಾಲದ ಕಂತುಗಳನ್ನು ಪಾವತಿಸಲು ಕಷ್ಟಪಡುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸಲು ಹಲವಾರು ಮಾರ್ಗಸೂಚಿಗಳನ್ನು ಮಾಡಿದೆ.ಇದು ಸಾಲ ಸುಸ್ತಿದಾರರಿಗೆ ಪರಿಹಾರ ನೀಡುವುದು ಖಂಡಿತಾ.ಈ ನಿಯಮದ ಪ್ರಕಾರ ಸಾಲವನ್ನು ಮರುಪಾವತಿಸಲು ಹೆಚ್ಚಿನ ಸಮಯಾವಕಾಶವನ್ನು ನೀಡಲಾಗುತ್ತದೆ. ಉದಾಹರಣೆಗೆ, ನೀವು 10 ಲಕ್ಷ ಸಾಲವನ್ನು ಹೊಂದಿದ್ದು, ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದಿಟ್ಟುಕೊಳ್ಳಿ.ಆಗಪ್ರಕಾರ ಈ ಸಾಲವನ್ನು ಪುನರ್ರಚಿಸಬಹುದು.ಈ ಸಂದರ್ಭದಲ್ಲಿ ನೀವು 5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನಂತರ ಉಳಿದ 5 ಲಕ್ಷ ರೂಪಾಯಿಗಳನ್ನು ದೀರ್ಘಾವಧಿಯಲ್ಲಿ ಕ್ರಮೇಣ ಪಾವತಿಸಬಹುದು.ಈ ಮೂಲಕ ನಿಮ್ಮ ಹೊರೆಯೂ ಕಡಿಮೆಯಾಗುತ್ತದೆ. ಇದನ್ನೂ ಓದಿ : ಡಿಫಾಲ್ಟ್‌ನಿಂದಾಗಿ ಮೇಲೆ ಪರಿಣಾಮ :ಸಾಲದ ಪುನರ್ರಚನೆಯನ್ನು ಪಡೆಯುವುದು ಉತ್ತಮ ಆಯ್ಕೆಯಾಗಿದೆ . ಏಕೆಂದರೆ ಇದು ನಿಮ್ಮಿಂದ ಲೋನ್ ಡಿಫಾಲ್ಟರ್ ಎಂಬ ಟ್ಯಾಗ್ ಅನ್ನು ತೆಗೆದುಹಾಕುತ್ತದೆ.ವ್ಯಕ್ತಿಯ ಸಾಲದ ಡೀಫಾಲ್ಟ್ ಅವನ ಕ್ರೆಡಿಟ್ ಹಿಸ್ಟರಿ ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.ಇದರಿಂದಾಗಿ ನಿಮ್ಮ ಸ್ಕೋರ್ ಕೂಡಾ ಕೆಟ್ಟದಾಗಿರುತ್ತದೆ.ಇದು ಭವಿಷ್ಯದಲ್ಲಿ ಸಾಲವನ್ನು ತೆಗೆದುಕೊಳ್ಳುವ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...