ಸರ್ಕಾರಿ ನೌಕರರಿಗೆ ಬಂಪರ್! ತುಟ್ಟಿಭತ್ಯೆಯ ನಂತರ ಈ ಎರಡು ಭತ್ಯೆಗಳಲ್ಲಿ 25% ದಷ್ಟು ಹೆಚ್ಚಳ ! 7th :2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. 7th :ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸುವುದರೊಂದಿಗೆ ಶೇ.50ಕ್ಕೆ ಏರಿಸಲಾಗಿದೆ.ಇದು ಜನವರಿ 2024 ರಿಂದ ಜಾರಿಗೆ ಬರಲಿದೆ.ಇದಾದ ನಂತರ ಮಕ್ಕಳ ಶಿಕ್ಷಣ ಭತ್ಯೆ () ಮತ್ತು ವಸತಿ ಅನುದಾನದಂತಹ ಕೆಲವು ಭತ್ಯೆಗಳನ್ನು ಸಹ 25% ವರೆಗೆ ಪರಿಷ್ಕರಿಸಲಾಗಿದೆ. ಸಂಬಂಧಿಸಿದಂತೆ ವಿವಿಧ ವಿಭಾಗಗಳಿಂದ ಹಲವು ಅನುಮಾನಗಳು ಹಾಗೂ ಪ್ರಶ್ನೆಗಳು ಎದ್ದಿದ್ದವು.ಇದರ ನಂತರ,ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ನಿಟ್ಟಿನಲ್ಲಿ ಎಲ್ಲಾ ಅನುಮಾನಗಳನ್ನು ನಿವಾರಿಸುವ ಸಲುವಾಗಿ ಸ್ಪಷ್ಟೀಕರಣಗಳನ್ನು ನೀಡಿದೆ. ಇದನ್ನೂ ಓದಿ : 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ನಿಯಮವನ್ನು ಸ್ಪಷ್ಟಪಡಿಸಿದ ಸಾರ್ವಜನಿಕ ಕುಂದುಕೊರತೆಗಳ ಇಲಾಖೆ,"ಪರಿಷ್ಕೃತ ವೇತನ ರಚನೆಯ ಮೇಲಿನ ತುಟ್ಟಿಭತ್ಯೆ ದರವನ್ನು ಪ್ರತಿ ಬಾರಿ 50% ಕ್ಕೆ ಹೆಚ್ಚಿಸಿದಾಗಮಿತಿಗಳು ಸ್ವಯಂಚಾಲಿತವಾಗಿ 25% ರಷ್ಟು ಹೆಚ್ಚಾಗುತ್ತವೆ." ಎಂದು ಹೇಳಲಾಗಿದೆ. ಇದನ್ನೂ ಓದಿ : ಮಕ್ಕಳ ಶಿಕ್ಷಣ ಭತ್ಯೆ :ಮಕ್ಕಳ ಶಿಕ್ಷಣ ಭತ್ಯೆಗೆ ಪ್ರತಿ ತಿಂಗಳು ಮರುಪಾವತಿ ಮೊತ್ತ 2,812.50 (ನಿಶ್ಚಿತ) ಎಂದು ಇಲಾಖೆ ತಿಳಿಸಿದೆ.ಅಲ್ಲದೆ, ಹಾಸ್ಟೆಲ್ ಸಬ್ಸಿಡಿ ಮೊತ್ತವು ತಿಂಗಳಿಗೆ 8,437.50 ರೂ, () ಇರುತ್ತದೆ.ಸರ್ಕಾರಿ ನೌಕರರು ಮಾಡುವ ನಿಜವಾದ ವೆಚ್ಚವನ್ನು ಲೆಕ್ಕಿಸದೆ ಈ ಮೊತ್ತವನ್ನು ಮಿತಿಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ :ವಿಕಲಚೇತನ ಮಹಿಳೆಯರಿಗೆ ವಿಶೇಷ ಶಿಶುಪಾಲನಾ ಭತ್ಯೆಯನ್ನು ಇಲಾಖೆಯ ಕಚೇರಿಯ ಜ್ಞಾಪಕ ಪತ್ರದಲ್ಲಿ ನಮೂದಿಸಿರುವ ಇತರ ಷರತ್ತುಗಳಿಗೆ ಒಳಪಟ್ಟು ತಿಂಗಳಿಗೆ 3,750 ರೂಪಾಯಿಗೆ ಪರಿಷ್ಕರಿಸಲಾಗಿದೆ. ಏತನ್ಮಧ್ಯೆ, ಮುಂದಿನ ವೇತನ ಆಯೋಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಬರಬಹುದು ಎಂದು ಹೇಳಲಾಗಿದೆ. ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ () 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ () ಅಡಿಯಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...